2
Heart Attack: ಪ್ರಾಚೀ ಕುಮಾವತ್ ಎಂಬ 9 ವರ್ಷದ ಬಾಲಕಿ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ರಾಜಸ್ತಾನದ ಜೈಪುರದಲ್ಲಿ ನಡೆದಿದೆ .
ಶಾಲೆಯಲ್ಲಿ ವಿರಾಮದ ಸಮಯದಲ್ಲಿ ಊಟಕ್ಕೆ ಕುಳಿತಿರುವಾಗ ಟಿಫಿನ್ ಬಾಕ್ಸ್ ತೆರೆಯುವಾಗ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದು, ಸಹಾಯಕ್ಕೆ ಧಾವಿಸಿದ ಶಿಕ್ಷಕರು ತಕ್ಷಣವೇ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.
ಆಕೆಯ ಬಿಪಿ ಕಡಿಮೆ ಯಾಗಿದ್ದು, ಉಸಿರಾಟಕ್ಕೆ ತೊಂದರೆಯಾಗಿತ್ತು. ಇದಾಗ್ಯೂ ಆಕೆಯ ಕುಟುಂಬದವರು ಆಕೆಯನ್ನು ಸಿಕಾರ್ನ ದ ದೊಡ್ಡ ಆಸ್ಪತ್ರೆಗೆ ಕರೆದೊಯ್ದರೂ ಕೂಡ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ.
ಬಾಲಕಿಗೆ ನೆಗಡಿ ಇದ್ದ ಕಾರಣದಿಂದ ಆಕೆ ಕಳೆದ ಮೂರು ದಿನಗಳಿಂದ ಶಾಲೆಗೆ ಬಂದಿರಲಿಲ್ಲ ಎಂದು ಶಿಕ್ಷಕರು ತಿಳಿಸಿದ್ದು, ಸೋಮವಾರ ಶಾಲೆಗೆ ಬಂದು ಮಧ್ಯಾಹ್ನದ ತನಕ ಆರೋಗ್ಯವಾಗಿದ್ದ ಹುಡುಗಿಗೆ ಹಠಾತ್ ಎಂದು ಹೃದಯಾಘಾತ ಉಂಟಾಗಿದೆ.
