Heavy rain: ರೈತ(Farmer) ಕಷ್ಟ ಪಟ್ಟು ವರ್ಷದ ಕೂಳಿಗಾಗಿ ಬೆಳೆ ಬೆಳೆಯುತ್ತಾನೆ. ಆದರೆ ಪ್ರಕೃತಿ ವಿಕೋಪಕ್ಕೆ(Natural disaster) ರೈತ 6-7 ತಿಂಗಳು ಹಾಕಿದ ಶ್ರಮ, ಅಲ್ಲದೆ ಅದಕ್ಕೆ ಹಾಕಿದ ದುಡ್ಡು ಎಲ್ಲವೂ ಕೇವಲ ಐದೇ ನಿಮಿಷದಲ್ಲಿ ನಿರ್ನಾಮವಾಗುತ್ತದೆ. ಈ ವರ್ಷದ ಮೊದಲ ಮಳೆಗೆ ರೈತನಿಗೆ ಭಾರಿ ನಷ್ಟ ಉಂಟಾಗಿದೆ. ಹಾಸನ(Hassan) ಜಿಲ್ಲೆಯಲ್ಲಿ ನಿನ್ನೆ ಸಂಜೆ ಮತ್ತು ರಾತ್ರಿ ಸುರಿದ ಧಾರಾಕಾರ ಮಳೆ ಮತ್ತು ಬಿರುಗಾಳಿಯ(Strome) ಆರ್ಭಟಕ್ಕೆ ಲಕ್ಷಾಂತರ ಮೌಲ್ಯದ ಬಾಳೆ ಗಿಡಗಳು(Banana Plant) ನೆಲಕಚ್ಚಿದೆ. ಇದರಿಂದ ಹೊಳೆನರಸೀಪುರ ತಾಲ್ಲೂಕಿನ ಅತ್ತಿಚೌಡೇನಹಳ್ಳಿ ಗ್ರಾಮದ ರೈತರು ಕಂಗಾಲಾಗಿದ್ದಾರೆ.
ನಿನ್ನೆ ಸುರಿದ ಭಾರೀ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದ್ದು, ಸುಮಾರು ಒಂದೂವರೆ ಸಾವಿರ ಗೊನೆ ಬಿಟ್ಟಿದ್ದ ಬಾಳೆ ಗಿಡಗಳು ನೆಲಕಚ್ಚಿದೆ. ಈ ಘಟನೆಯಲ್ಲಿ ಗ್ರಾಮದ ರೈತ ಲಿಂಗರಾಜು ಎಂಬುವವರಿಗೆ ಸೇರಿದ ಬಾಳೆ ತೋಟ ಹಾನಿಯಾಗಿದ್ದು, ಗಾಳಿ ಮಳೆಗೆ ಗೊನೆ ಸಮೇತ ಸಾವಿರಾರು ಬಾಳೆ ಗಿಡಗಳು ನೆಲಕ್ಕುರುಳಿವೆ.
ಸದ್ಯ ಬಾಳೆ ಹಣ್ಣಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಅಲ್ಲದೆ ಇನ್ನೇನು ಸಾಲು ಸಾಲು ಹಬ್ಬಗಳು ಆರಂಭವಾಗುತ್ತವೆ. ಹಾಗಾಗಿ ಭರ್ಜರಿ ಆದಾಯದ ನಿರೀಕ್ಷಿಯಲ್ಲಿದ್ದ ರೈತ ಲಿಂಗರಾಜು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಮೊದಲ ಮಳೆಯಿಂದ ಅಂದಾಜು ಏಳು ಲಕ್ಷ ರೂಪಾಯಿ ಬಾಳೆ ಬೆಳೆ ನಷ್ಟವಾಗಿದೆ. ಫಸಲಿಗೆ ಬಂದಿದ್ದ ಬೆಳೆ ಕಳೆದುಕೊಂಡು ಕಂಗಾಲಾಗಿರುವ ರೈತ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
