General Knowledge: ಬಟ್ಟೆಗಳ ಟ್ಯಾಗ್ನಲ್ಲಿರುವ ಕೆಲವು ಚಿಹ್ನೆ ಏನು ಸೂಚಿಸುತ್ತೆ ಅಂತಾ ಎಷ್ಟೋ ಜನರಿಗೆ ತಿಳಿದಿರುವುದಿಲ್ಲ.ಸಾಮಾನ್ಯವಾಗಿ ಬಟ್ಟೆ ಕೊಳ್ಳಲು ಹೊರಗೆ ಅಂಗಡಿಗೆ ಹೋದಾಗ ಕೆಲವೊಮ್ಮೆ ನಾವು ಗೊಂದಲಕ್ಕೆ ಒಳಗಾಗುವಂತಹ ಒಂದಷ್ಟು ಪದಗಳನ್ನು ಬಟ್ಟೆಯ ಟ್ಯಾಗ್ ಮೇಲೆ ಕಾಣುತ್ತೇವೆ.
ಹೌದು, ಬಟ್ಟೆ ಖರೀದಿ ವೇಳೆ XL, XXL ಪದಗಳಿರುವುದನ್ನು ಕಾಣುತ್ತೇವೆ. ನಂತರ ಇಷ್ಟವಾಗುವ ಬಟ್ಟೆಯನ್ನು ಕಾಲರ್ ಬಳಿ ಇಟ್ಟುಕೊಂಡು ಕನ್ನಡಿಯಲ್ಲಿ ನೋಡುತ್ತೇವೆ.
ಸಾಮಾನ್ಯವಾಗಿ ನಮ್ಮೆಲ್ಲರಿಗೂ ಬಟ್ಟೆಗಳ ಮೇಲಿರುವ S, M, XL XXL ಪದಗಳ ಬಗ್ಗೆ ತಿಳಿದಿರುತ್ತೇವೆ. ಆದರೆ ಇದೇ ಪದಗಳಂತೆ X ಅಕ್ಷರದ ಅರ್ಥ ನಿಮಗೆ ತಿಳಿದಿದ್ಯಾ? L ಅಂದರೆ ದೊಡ್ಡ ಸೈಜ್ ಮತ್ತು S ಅಂದರೆ ಚಿಕ್ಕ ಸೈಜ್ ಮತ್ತು M ಅಂದರೆ ಮಧ್ಯಮ ಗಾತ್ರ (ಮೀಡಿಯಂ ಸೈಜ್) ಎಂಬುವುದನ್ನು ಸೂಚಿಸುತ್ತದೆ ಎಂದು ಅಂದು ಕೊಂಡಿದ್ದೇವೆ. ಆದರೆ XS, XL, XXL ಒಟ್ಟಿನಲ್ಲಿ X ಎಂದರೆ ಏನು ಎಂದು ನಿಮಗೆ ತಿಳಿದಿದ್ಯಾ?
ಈ ಇಂಗ್ಲಿಷ್ ಪದದ ವಿಶೇಷ ಅಕ್ಷರದ ಅರ್ಥವೇನು ಎಂದು ನಾವಿಂದು ತಿಳಿಯೋಣ. ಏಕೆಂದರೆ ನೀವು ಪ್ರಶ್ನೆಯನ್ನು ಕೇಳಿದಾಗ ಅನೇಕ ಮಂದಿಯ ಬಳಿ ಇದಕ್ಕೆ ಉತ್ತರವಿರುವುದಿಲ್ಲ ಎಂಬುವುದನ್ನು ನೀವು ನೋಡುತ್ತೀರಿ. ಇದು ಒಂದು ಸಾಮಾನ್ಯ ಜ್ಞಾನ ಪ್ರಶ್ನೆಯು (General Knowledge) ಹೌದು.
ವಾಸ್ತವವಾಗಿ, ‘X’ ಎಂದರೆ ಎಕ್ಸ್ಟ್ರಾ ಮತ್ತು ‘L’ ಎಂದರೆ ದೊಡ್ಡದಾದ ಬಟ್ಟೆ ಗಾತ್ರಗಳು. ಆದ್ದರಿಂದ, XL ಎಂದರೆ, ಎಕ್ಸ್ಟ್ರಾ ಲಾರ್ಜ್. XXL ಎಂದರೆ ಎಕ್ಸ್ಟ್ರಾ ಎಕ್ಸ್ಟ್ರಾ ಲಾರ್ಜ್. ಅಂದರೆ, ಈ X ಅನ್ನು ಗಾತ್ರದ ಶ್ರೇಣಿಯನ್ನು ಸೂಚಿಸಲು ಬಳಸಲಾಗುತ್ತದೆ.
ವಾಸ್ತವವಾಗಿ, ‘X’ ಎಂದರೆ ದೊಡ್ಡದು. XL ಎಂದರೆ ಎಕ್ಸ್ಟ್ರಾ ಲಾರ್ಜ್ ಮತ್ತು XXL ಎಂದರೆ ಎಕ್ಸ್ಟ್ರಾ ಎಕ್ಸ್ಟ್ರಾ ಲಾರ್ಜ್. ಮತ್ತೆ XS ಎಂದರೆ ಹೆಚ್ಚು ಚಿಕ್ಕದು ಎಂದರ್ಥ .
ವಿಶಿಷ್ಟವಾಗಿ, XL ಗಾತ್ರದ ಶರ್ಟ್ 42 ಇಂಚುಗಳು ಮತ್ತು 44 ಇಂಚುಗಳ ನಡುವೆ ಅಳತೆ ಇರುತ್ತದೆ. ಅಂತೆಯೇ, XXL ಶರ್ಟ್ಗಳು ಅಥವಾ ಉಡುಪುಗಳು ಸಾಮಾನ್ಯವಾಗಿ 44 ಇಂಚುಗಳು ಮತ್ತು 46 ಇಂಚುಗಳ ನಡುವೆ ಗಾತ್ರದಲ್ಲಿರುತ್ತವೆ. ಅದೇ ರೀತಿ, S ಎಂದರೆ ಸ್ಮಾಲ್, XS ಎಂದರೆ ಎಕ್ಸ್ಟ್ರಾ ಸ್ಮಾಲ್ ಮತ್ತು M ಎಂದರೆ ಮಧ್ಯಮ ಗಾತ್ರದ್ದು. ಇವುಗಳು ವಾಸ್ತವವಾಗಿ ಪುರುಷರು ಮತ್ತು ಮಹಿಳೆಯರಿಗೆ ಸರಿಯಾದ ರೀತಿಯ ಉಡುಪುಗಳನ್ನು ತೆಗೆದುಕೊಳ್ಳಲು ಸಹಾಕಾರಿ ಆಗಿದೆ.
