Home » ಇಲ್ಲಿದೆ ಚಂದ್ರಶೇಖರ ಗುರೂಜಿಯವರ ಎರಡನೇ ಪತ್ನಿಯ ವಿವರ

ಇಲ್ಲಿದೆ ಚಂದ್ರಶೇಖರ ಗುರೂಜಿಯವರ ಎರಡನೇ ಪತ್ನಿಯ ವಿವರ

0 comments

ಚಂದ್ರಶೇಖರ ಗುರೂಜಿ ಅವರ ಪತ್ನಿ ಅಂಕಿತಾ, ತೀರ್ಥಹಳ್ಳಿ ತಾಲೂಕು ಮಂಡಗದ್ದೆ ಸಮೀಪದ ಹೆಮ್ಮಕ್ಕಿ ಗ್ರಾಮದವರು. ಮೂರು ವರ್ಷದ ಹಿಂದೆ ಚಂದ್ರಶೇಖರ ಗುರೂಜಿ ಅವರು ಹೆಮ್ಮಕ್ಕಿ ಅಂಕಿತಾ ಅವರನ್ನ ವಿವಾಹವಾಗಿದ್ದರು.

ಚಂದ್ರಶೇಖರ ಗುರೂಜಿ ಅವರಿಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ಸಾವನ್ನಪ್ಪಿದ ಬಳಿಕ ಚಂದ್ರಶೇಖರ ಗುರೂಜಿ ಮತ್ತೊಬ್ಬರನ್ನು ವಿವಾಹ ಆದರು. ಚಂದ್ರಶೇಖರ ಗುರೂಜಿ ಅವರ ಮೊದಲ ಪತ್ನಿಗೆ ಒಬ್ಬಳು ಮಗಳಿದ್ದಾರೆ. ಎರಡನೇ ಪತ್ನಿಗೆ ಮಕ್ಕಳಿಲ್ಲ. 

ಚಂದ್ರಶೇಖರ ಗುರೂಜಿ ಅವರ ಹತ್ಯೆಯಾದ ವಿಚಾರ ತಿಳಿಯುತ್ತಿದ್ದಂತೆ ಹೆಮ್ಮಕ್ಕಿಯಲ್ಲಿದ್ದ ಅಂಕಿತಾ ಅವರ ತಂದೆ ರಮೇಶ್ ಮತ್ತು ತಾಯಿ ಶೈಲಾ ಅವರು ಹುಬ್ಬಳಿಗೆ ತೆರಳಿದ್ದಾರೆ. 

ಹೆಮ್ಮಕ್ಕಿಗೆ ಬಂದಾಗ ಚಂದ್ರಶೇಖರ ಅವರು ಎಲ್ಲರೊಂದಿಗೆ ಬೆರೆಯುತ್ತಿದ್ದರು. ಪ್ರೀತಿ, ಸ್ನೇಹದಿಂದ ಎಲ್ಲರನ್ನು ಮಾತನಾಡಿಸುತ್ತಿದ್ದರು. ಸ್ವಾಮೀಜಿ ಅಣ್ಣನ ಮಗನ ಮಗ ಮೃತಪಟ್ಟಿದ್ದರಿಂದ ಕಾರ್ಯಕ್ಕಾಗಿ ಹುಬ್ಬಳ್ಳಿಗೆ ಬಂದಿದ್ದರು. ಆ ವೇಳೆ ಈ ದುರ್ಘಟನೆ ನಡೆದಿದೆ. ಚಂದ್ರಶೇಖರ ಗುರೂಜಿಯನ್ನು ಕಳೆದುಕೊಂಡು ದೇವರನ್ನೇ ಕಳೆದುಕೊಂಡಂತಾಗಿದೆ ಎಂದು ಅಂಕಿತಾ ಅವರ ಅಜ್ಜಿ ಸಾವಿತ್ರಮ್ಮ ಕಣ್ಣೀರಾದರು.

You may also like

Leave a Comment