5
BJP: ರಾಜ್ಯದ ಐವರು ಬಿಜೆಪಿಯ ಪ್ರಮುಖ ನಾಯಕರಿಗೆ ಹೈಕಮಾಂಡ್ ನೋಟಿಸ್ ಜಾರಿಗೊಳಿಸಿದ್ದು 72 ಗಂಟೆ ಒಳಗಡೆ ಉತ್ತರಿಸುವಂತೆ ಆದೇಶಿಸಿದೆ.
ಬಿಜೆಪಿಯ ಶಿಸ್ತು ಪಾಲನಾ ಸಮಿತಿಯಿಂದ ಕರ್ನಾಟಕದ ಐವರು ಬಿಜೆಪಿ ನಾಯಕರಿಗೆ ನೋಟಿಸ್ ನೀಡಲಾಗಿದೆ. ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಿ.ಪಿ ಹರೀಶ್, ಶಿವರಾಮ್ ಹೆಬ್ಬಾರ್ ಹಾಗೂ ಎಸ್ ಟಿ ಸೋಮಶೇಖರ್ ಗೆ ಶಿಸ್ತು ಸಮಿತಿಯಿಂದ ನೋಟಿಸ್ ನೀಡಲಾಗಿದೆ.
ಬಿಜೆಪಿ ಶಿಸ್ತು ಪಾಲನಾ ಸಮಿತಿಯಿಂದ ನೀಡಿರುವಂತ ನೋಟಿಸ್ ನಲ್ಲಿ 72 ಗಂಟೆಯಲ್ಲಿ ಉತ್ತರಿಸುವಂತೆ ತಿಳಿಸಲಾಗಿದೆ. ಮಾಜಿ ಸಚಿವ ಯತ್ನಾಳ್ ರೀತಿ ಇದೀಗ ಈ ಐವರು ನಾಯಕರಿಗೂ ಬಿಜೆಪಿ ನೋಟಿಸ್ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.
