ಕರ್ನಾಟಕ ವಿಧಾನಸಭೆ ವಿಶೇಷ ಅಧಿವೇಶನ ಆರಂಭದಲ್ಲಿ ರಾಜ್ಯಪಾಲ ಥಾವರ್ ಚಂದರ್ ಅವರು ಒಂದೇ ವಾಕ್ಯದಲ್ಲಿ ಭಾಷಣ ಮುಗಿಸಿ ನಿರ್ಗಮಿಸುವಾಗ ಕಾಂಗ್ರೆಸ್ ನವರು ಹೈಡ್ರಾಮ ಮಾಡಿದ್ದು, ಈ ಸಂದರ್ಭದಲ್ಲಿ ಕಾಂಗ್ರೆಸ್ ಎಂಎಲ್ಸಿ ಬಿ.ಕೆ ಹರಿಪ್ರಸಾದ್ ಅವರ ಬಟ್ಟೆ ಹರಿದಿದೆ.
ಬಿಜೆಪಿಯವರೇ ಬಟ್ಟೆ ಎಳೆದು ಹರಿದಿದ್ದಾರೆ ಎಂದು ಹರಿಪ್ರಸಾದ್ ಆರೋಪ ಮಾಡಿದ್ದಾರೆ. ಆದರೆ ವೈರಲ್ ವಿಡಿಯೋದಲ್ಲಿ ಬಿಕೆ ಹರಿಪ್ರಸಾದ್ ಅವರನ್ನು ಮಾರ್ಷಲ್‌ಗಳ ಅಲುಗಾಡಲು ಸಾಧ್ಯವಾಗದಂತೆ ಪಕ್ಕಕ್ಕೆ ಎಳೆದೊಯ್ದು ಬಿಟ್ಟಿದ್ದು, ಈ ವೇಳೆ ಹರಿಪ್ರಸಾದ್ ಬಟ್ಟೆ ಹರಿದಿದೆ ಎನ್ನಲಾಗಿದೆ.
ಬಿ.ಕೆ.ಹರಿಪ್ರಸಾದ್, ಐವಾನ್ ಡಿಸೋಜಾ, ಶಾಸಕರಾದ ಶರತ್ ಬಚ್ಚೇಗೌಡ, ಪ್ರದೀಪ್ ಈಶ್ವರ್, ಹೆಚ್.ಸಿ.ಬಾಲಕೃಷ್ಣ ಅವರು ಘೋಷಣೆ ಕೂಗಿದ್ದಾರೆ. ಆಗ ಹರಿಪ್ರಸಾದ್ ಅವರನ್ನು ಮಾರ್ಷಲ್‌ಗಳು ಪಕ್ಕಕ್ಕೆ ಎಳೆದೊಯ್ದಿದ್ದು, ವಿಡಿಯೋದಲ್ಲಿ ಕಂಡು ಬಂದಿದೆ.















