2
ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಶಿ ರಾಶಿ ಕಾಂಡೊಮ್ ಗಳು ಪತ್ತೆಯಾಗಿ ಸುದ್ದಿಯಾದ ಬೆನ್ನಲ್ಲೇ, ಅದರ ಮೂಲ ಕಂಡುಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಷ್ಟಕ್ಕೂ ಹೆದ್ದಾರಿಯಲ್ಲಿ ಕಾಗೆಗಳಂತೆ ಕಾಂಡೋಮ್ ಪತ್ತೆಯಾಗಲು ಆ ಸುರಂಗ ಕಾರಣವಾಗಿತ್ತು.
ವಸತಿ ಗೃಹವೊಂದರೊಳಗೆ ಸುರಂಗ ಕೊರೆದು, ಅದರಲ್ಲಿ ಅವಿತು ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ಮಾಹಿತಿಯ ಆಧಾರದಲ್ಲಿ ಪೊಲೀಸರು ದಾಳಿ ನಡೆಸಿದ್ದು, ಐವರು ಪುರುಷರನ್ನು ಬಂಧಿಸಲಾಗಿದ್ದು, ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ.
ಈ ಘಟನೆಯು ತುಮಕೂರು ನಗರದ ಕ್ಯಾತ್ಸಂದ್ರ ವಸತಿ ಗೃಹದಲ್ಲಿ ವೇಶ್ಯವಾಟಿಕೆ ನಡೆಯುತ್ತಿರುವ ಖಚಿತ ಮಾಹಿತಿ ಅರಿತ ಪೊಲೀಸರ ತಂಡ ವಸತಿ ಗೃಹಕ್ಕೆ ದಾಳಿ ನಡೆಸಿದಾಗ, ಪೊಲೀಸರು ಬರುವ ಸೂಚನೆ ಅರಿತ ಲಾಡ್ಜ್ ಸಿಬ್ಬಂದಿ ದಂಧೆಯಲ್ಲಿ ಭಾಗಿಯಾಗಿರುವವರನ್ನು ಅಡಗುತಾಣದೊಳಗೆ ಕಳುಹಿಸಿ ಅಲ್ಲಿ ಕೆಲಸ ಮುಂದುವರಿಸಲಾಗುತ್ತಿತ್ತು.ಪೊಲೀಸರು ಸುರಂಗದೊಳಗಿಂದಲೇ ಐವರು ಆರೋಪಿಗಳನ್ನು ಬಂಧಿಸಿದ್ದು, ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.
