Home » ಹಿಜಾಬ್ ಪ್ರಕರಣ : ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಮಹತ್ವದ ಸುತ್ತೋಲೆ!!!

ಹಿಜಾಬ್ ಪ್ರಕರಣ : ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಮಹತ್ವದ ಸುತ್ತೋಲೆ!!!

0 comments

ಬೆಂಗಳೂರು : ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು ಹಿಜಾಬ್ ಗೆ ಸಂಬಂಧಪಟ್ಟಂತೆ ಸುತ್ತೋಲೆಯನ್ನು ಹೊರಡಿಸಿದೆ. ಇದರ ಪ್ರಕಾರ, ಅಲ್ಪಸಂಖ್ಯಾತ ಇಲಾಖೆಯಡಿಯಲ್ಲಿ ಬರುವ ವಸತಿ ಶಾಲಾ, ಕಾಲೇಜು ‌ಮತ್ತು ಮೌಲಾನಾ ಅಜಾದ್ ಉರ್ದು ಶಾಲೆಗಳ ತರಗತಿಗಳಲ್ಲಿ ಕೇಸರಿ ಶಾಲು, ಸ್ಕಾರ್ಫ್ , ಹಿಜಾಬ್ ಧರಿಸುವಂತಿಲ್ಲ‌ ಎಂಬ ಮಾಹಿತಿ ಇದೆ.

ಹಿಜಾಬ್ ಗಲಾಟೆ ಹೈಕೋರ್ಟ್ ಮಧ್ಯಂತರ ಆದೇಶ‌ ಕೊಟ್ಟರೂ ಕೂಡಾ ಮುಗಿದಿಲ್ಲ. ಮಧ್ಯಂತರ ಆದೇಶ ಪಾಲನೆ ಮಾಡಲು ಹೇಳಿದರೂ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡೇ ಬರುತ್ತಿದ್ದಾರೆ. ಇದರ ಬಗ್ಗೆ ಮೌಖಿಕವಾಗಿ ಆದೇಶ ನೀಡಲಾಗಿತ್ತು. ಆದರೆ ಅದು ಪಾಲನೆಯಾಗದಿದ್ದರಿಂದ ಸರಕಾರ ಅಧಿಕೃತ ಆದೇಶ ಹೊರಡಿಸಿದೆ.

You may also like

Leave a Comment