Home » ಹಿಜಾಬ್ ವಿವಾದ ಹಿನ್ನೆಲೆ : ತಾಜ್ ಮಹಲ್ ನಲ್ಲಿ ಹನುಮಾನ್ ಚಾಲೀಸ ಪಠಿಸಲು ಮುಂದಾದ ವಿಶ್ವ ಹಿಂದೂ ಪರಿಷತ್| ತಡೆಹಿಡಿದ ಪೊಲೀಸರು|

ಹಿಜಾಬ್ ವಿವಾದ ಹಿನ್ನೆಲೆ : ತಾಜ್ ಮಹಲ್ ನಲ್ಲಿ ಹನುಮಾನ್ ಚಾಲೀಸ ಪಠಿಸಲು ಮುಂದಾದ ವಿಶ್ವ ಹಿಂದೂ ಪರಿಷತ್| ತಡೆಹಿಡಿದ ಪೊಲೀಸರು|

0 comments

ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ತಾಜ್ ಮಹಲ್ ನಲ್ಲಿ ಹನುಮಾನ್ ಚಾಲೀಸ ಪಠಿಸಲು ಮುಂದಾಗಿದ್ದಾಗ ಪೊಲೀಸರು ತಡೆದಿದ್ದಾರೆ.

ವಿಶ್ವಹಿಂದೂ ಪರಿಷತ್, ಸೇವಾ ಭಾರತಿ ಮತ್ತು ದುರ್ಗಾವಾಹಿನಿಯ ಕಾರ್ಯಕರ್ತರನ್ನು ಆಗ್ರಾದ ವಿವಿಧೆಡೆ ಪೊಲೀಸರು ಬಂಧನ ಮಾಡಿದ್ದಾರೆ.

ತಾಜ್ ಮಹಲ್ ಎನ್ನುವುದು ‘ ತೇಜೋ ಮಹಲ್’ ಆಗಿದೆ. ಹೀಗಾಗಿ ಅಲ್ಲಿ ಹನುಮಾನ್ ಚಾಲೀಸ ಪಠಿಸಲು ತೆರಳುತ್ತಿದ್ದೇವೆ. ಆದರೆ ನಮ್ಮನ್ನು ತಡೆ ಹಿಡಿದಿದ್ದಾರೆ ಎಂದು ವಿಶ್ವ ಹಿಂದು ಪರಿಷತ್ ನ ಅಶೀಶ್ ಆರ್ಯ ಹೇಳಿದ್ದಾರೆ.

ಕರ್ನಾಟಕದಲ್ಲಿ ವಿವಾದ ಭುಗಿಲೆದ್ದ ಕಾರಣ, ಅದರ ವಿರುದ್ಧ ಪ್ರತಿಭಟನೆ ಮಾಡುವ ಸಲುವಾಗಿ ವಿವಿಧ ಸಂಘಟನೆಯ ಕಾರ್ಯಕರ್ತರು ತಾಜ್ ಮಹಲ್ ಪ್ರವೇಶಿಸಿ‌ ಅಲ್ಲಿ ಹನುಮಾನ್ ಚಾಲೀಸ ಪಠಿಸಲು ಮುಂದಾಗಿದ್ದರು. ಸರ್ಕಲ್ ಅಧಿಕಾರಿ ರಾಜೀವ್ ಕುಮಾರ್ ಅವರು ಕಾರ್ಯಕರ್ತರನ್ನು ತಡೆಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ.

You may also like

Leave a Comment