ಇನ್ನೇನು ಹೊಸ ವರ್ಷ ಆರಂಭದಲ್ಲಿ ಸರ್ಕಾರ ಜನರಿಗೆ ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ಹಲವಾರು ಪ್ರಯತ್ನ ಮಾಡುತ್ತಲೇ ಇದೆ. ಸದ್ಯ ಅಂಚೆ ಕಚೇರಿ ಯಲ್ಲಿ ನೀವು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಹಿರಿಯ ನಾಗರಿಕರ ಉಳಿತಾಯ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ,ಎನ್‌ಎಸ್‌ಸಿ, ಕೆವಿಪಿ ಮುಂತಾದ ಯೋಜನೆಗಳಲ್ಲಿ ನೀವು ಹೂಡಿಕೆ ಮಾಡಿದ್ದರೆ ಸರ್ಕಾರ ನಿಮಗೊಂದು ಗುಡ್ ನ್ಯೂಸ್ ನೀಡಿದೆ.
ಹೌದು ಹೊಸ ವರ್ಷಕ್ಕೆ ಕೇಂದ್ರ ಸರ್ಕಾರ ಮಧ್ಯಮ ವರ್ಗದ ಜನತೆಗಾಗಿ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸುವ ನಿರೀಕ್ಷೆಗಳಿವೆ.
ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ), ಹಿರಿಯ ನಾಗರಿಕರ ಉಳಿತಾಯ ಯೋಜನೆ, ಎನ್‌ಎಸ್‌ಸಿ, ಕೆವಿಪಿ ಮುಂತಾದ ಯೋಜನೆಗಳ ಮೇಲಿನ ಬಡ್ಡಿದರಗಳು ಈ ವಾರದಿಂದಲೇ ಹೆಚ್ಚಾಗುವ ಸಾಧ್ಯತೆಯಿದೆ. ಆರ್‌ಬಿಐನ ರೆಪೊ ದರ ಏರಿಕೆಯ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಎಫ್‌ಡಿ ಮೇಲಿನ ಬಡ್ಡಿದರವನ್ನು ಹೆಚ್ಚಿಸುತ್ತಿವೆ. ಈ ಆದೇಶದಲ್ಲಿ ಕೇಂದ್ರ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನೂ ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಈಗಾಗಲೇ ಮೇ 2022 ರಿಂದ ಬ್ಯಾಂಕ್ ಸ್ಥಿರ ಠೇವಣಿ ದರಗಳು ಹೆಚ್ಚಾಗಿವೆ. ಕೆಲವು ಬ್ಯಾಂಕುಗಳು 9 ಪ್ರತಿಶತದಷ್ಟು ಬಡ್ಡಿದರ ನೀಡುತ್ತಿವೆ. ಆದ್ದರಿಂದ, ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳು ಹೆಚ್ಚಾಗಬಹುದು ಎಂಬ ನಿರೀಕ್ಷೆಗಳಿವೆ.
ಕೇಂದ್ರ ಸರ್ಕಾರವು ಸಾಮಾನ್ಯವಾಗಿ ತ್ರೈಮಾಸಿಕ ಆಧಾರದ ಮೇಲೆ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಪರಿಶೀಲಿಸುತ್ತದೆ. ಈ ಸಮಯದಲ್ಲಿ ಬಡ್ಡಿದರ ಹೆಚ್ಚು ಅಥವಾ ಕಡಿಮೆ ಮಾಡಬಹುದು.
ಕೆಲವು ವರದಿಗಳ ಮಾಹಿತಿ ಪ್ರಕಾರ, ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವು 44 ರಿಂದ 77 ಮೂಲ ಅಂಕಗಳಿಗೆ ಹೆಚ್ಚಾಗಬೇಕು. ಪಿಪಿಎಫ್ ಸ್ಕೀಮ್ 2 ರ ಬಡ್ಡಿ ದರವು ಶೇಕಡಾ 7.72 ಆಗಿರಬೇಕು. ಆದರೆ ಈಗ ಈ ಪ್ರಮಾಣ ಶೇ.7.1ರಷ್ಟಿದೆ. ಅಲ್ಲದೆ ಒಂದು ವರ್ಷದ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವು 5.5 ಶೇಕಡಾ. ಆದರೆ ಸೂತ್ರದ ಪ್ರಕಾರ ಶೇ.6.09ರಷ್ಟಿರಬೇಕು ಎನ್ನಲಾಗುತ್ತದೆ.
ಎರಡು ವರ್ಷಗಳ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವು ಶೇಕಡಾ 6.33 ಆಗಿರಬೇಕು. ಆದರೆ ಈಗ ಈ ಪ್ರಮಾಣ ಶೇ.5.7ರಷ್ಟಿದೆ. ಅಲ್ಲದೆ ಮೂರು ವರ್ಷಗಳ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವು ಶೇ.5.8ರಷ್ಟಿದ್ದು, ಇದು 6.57ರಷ್ಟು ಇರಬೇಕು. ಐದು ವರ್ಷಗಳ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವು ಶೇ.6.7ರಷ್ಟಿದ್ದ, ಶೇ.7.29ರಷ್ಟಿರಬೇಕು ಎಂಬುದಾಗಿದೆ.
ಮರುಕಳಿಸುವ ಠೇವಣಿಗಳ ಮೇಲೆ ಶೇಕಡಾ 6.57 ಬಡ್ಡಿಯನ್ನು ಪಡೆಯಬೇಕು. ಆದರೆ ಈಗ ಬಡ್ಡಿ ದರ ಶೇ.5.8ರಷ್ಟಿದೆ. ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ಶೇಕಡಾ 7 ರ ಬದಲಾಗಿ ಶೇಕಡಾ 7.47 ರ ಬಡ್ಡಿ ಆಗಬೇಕು.
ಅದಲ್ಲದೆ SSC ಯೋಜನೆಯಲ್ಲಿ, ಪ್ರಸ್ತುತ ಬಡ್ಡಿ ದರವು ಶೇ.6.8ರಷ್ಟಿದ್ದು, ಶೇ.7.48 ಬಡ್ಡಿ ನೀಡಬೇಕು. ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿಯು ಶೇಕಡಾ 7.6 ಆಗಿದೆ. ಆದರೆ ಶೇ.8.04ರಷ್ಟಿರಬೇಕು. ಸುಕನ್ಯಾ ಸುಕನ್ಯಾ ಸಮೃದ್ಧಿ ಯೋಜನೆಗೆ ಶೇ.8.22 ಬಡ್ಡಿ ದೊರೆಯುವ ನಿರೀಕ್ಷೆ ಇದೆ. ಆದರೆ ಶೇ.7.6 ಬಡ್ಡಿ ಬರುತ್ತಿದೆ.
ಈ ರೀತಿಯಲ್ಲಿ ವರದಿಯ ಮೂಲಕ ಅಂಚೆ ಕಚೇರಿಯಲ್ಲಿ ನೀವು ಇರಿಸಿದ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸುವ ನಿರೀಕ್ಷೆಗಳಿವೆ ಎಂಬ ಮಾಹಿತಿ ತಿಳಿದು ಬಂದಿದೆ.
