Home » Himachal Pradesh: ಇಸ್ಲಾಂ ಧರ್ಮ ಸ್ವೀಕರಿಸಿದ ಬ್ರಾಹ್ಮಣ ಕುಟುಂಬದ ಯುವತಿ – ಕಾರಣ ಹೀಗಿದೆ !!

Himachal Pradesh: ಇಸ್ಲಾಂ ಧರ್ಮ ಸ್ವೀಕರಿಸಿದ ಬ್ರಾಹ್ಮಣ ಕುಟುಂಬದ ಯುವತಿ – ಕಾರಣ ಹೀಗಿದೆ !!

0 comments

Himachal Pradesh: ಬ್ರಾಹ್ಮಣ ಕುಟುಂಬದ ಹುಡುಗಿಯೊಬ್ಬಳು ಇಸ್ಲಾಂನ್ನು ಸ್ವೀಕರಿಸಿದ ಘಟನೆ ಹಿಮಾಚಲ ಪ್ರದೇಶದಲ್ಲಿ(Himachal Pradesh) ನಡೆದಿದೆ. ಇಷ್ಟೇ ಅಲ್ಲದೆ ಅವಳು ಮನೆಯಲ್ಲಿ ನಮಾಜು ಮಾಡುತ್ತಾಳಂತೆ !! ಇದೀಗ ಈ ಪ್ರಕರಣಕ್ಕೆ ಹುಡುಗಿಯ ಕುಟುಂಬದವರು ಹೊರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ದೂರಿನಲ್ಲಿ ಯುವತಿಯ ಪೋಷಕರು ‘ನಮ್ಮ ಮಗಳು ಮನೆಯಲ್ಲಿ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ನಮಾಜ್ ಪಠಣ ಮಾಡುತ್ತಾಳೆ. ಇದರಿಂದ ಇಡೀ ಮನೆಯ ವಾತಾವರಣವು ಹಾಳಾಗಿದೆ. ನಮ್ಮ ಮಗಳು ಹೀಗೆ ಮಾಡುವವಳಲ್ಲ, ಆದರೆ ಅವಳ ಬ್ರೈನ್ ವಾಶ್ ಮಾಡಲಾಗಿದ್ದು, ಇದರ ಹಿಂದೆ ಒಬ್ಬ ಮುಸಲ್ಮಾನ ಯುವಕನ ಕೈವಾಡವಿದೆ” ಎಂದು ಆರೋಪಿಸಿದ್ದಾರೆ.

ಅಂದಹಾಗೆ ದೊರೆತ ಮಾಹಿತಿ ಪ್ರಕಾರ ‘ಮಂಡಿಯಲ್ಲಿನ ಈ ಹಿಂದೂ ಹುಡುಗಿಯು ಪಂಜಾಬಿನಲ್ಲಿ ಓದುತ್ತಿದ್ದಳು. ಪಂಜಾಬಿನಿಂದ ಬಂದ ನಂತರ ಮನೆಯಲ್ಲಿ ಇಸ್ಲಾಂಗೆ ಸಂಬಂಧಿಸಿದ ಚಟುವಟಿಕೆಗಳನ್ನು ಮಾಡಲು ಪ್ರಾರಂಭಿಸಿದ್ದಾಳೆ. ಇದನ್ನು ಕಂಡು ಪೋಷಕರು ಕಂಗಾಲಾಗಿದ್ದಾರೆ.

You may also like

Leave a Comment