Home » ಹಿಂದೂವಾಗಿ ಹುಟ್ಟಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಗೆ ಸಂತನ ಪಟ್ಟ!! ಮೊದಲ ಭಾರತೀಯ ಎನ್ನುವ ಹೆಗ್ಗಳಿಕೆ-ಸಂತನಾಗಲು ಕಾರಣವಾಯಿತು ಅದೊಂದು ಘಟನೆ

ಹಿಂದೂವಾಗಿ ಹುಟ್ಟಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಗೆ ಸಂತನ ಪಟ್ಟ!! ಮೊದಲ ಭಾರತೀಯ ಎನ್ನುವ ಹೆಗ್ಗಳಿಕೆ-ಸಂತನಾಗಲು ಕಾರಣವಾಯಿತು ಅದೊಂದು ಘಟನೆ

0 comments

ಭಾರತದಲ್ಲಿ ಹಿಂದೂವಾಗಿ ಜನಿಸಿ, ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಯೊಬ್ಬರನ್ನು ಯುರೋಪ್ ರಾಷ್ಟ್ರದಲ್ಲಿ ಸಂತರೆಂದು ಕರೆಯಲಾಗಿದ್ದು, ಹೀಗೆ ವ್ಯಾಟಿಕನ್ ನಲ್ಲಿ ಸಂತರೆಂದು ಕರೆಯಲ್ಪಟ್ಟ ಮೊದಲ ಭಾರತೀಯ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ ಚೆನ್ನೈ ಮೂಲದ ದೇವಸಹಾಯಂ(ನೀಲಕಂದನ್ ಪಿಳ್ಳೆ). ಸಂತ ಎಂದು ಕರೆಯಲು ಅದೊಂದು ಘಟನೆಯೇ ಕಾಣವಾಯಿತು ಎಂದು ಹೇಳಲಾಗುತ್ತಿದೆ.

ಹೌದು, ಕನ್ಯಾಕುಮಾರಿಯಲ್ಲಿ ಜನಿಸಿದ್ದ ಪಿಳ್ಳೆ, ಆ ಬಳಿಕ ವಿರುವಾಂಕೂರ್ ನ ಅರಮನೆಯಲ್ಲಿ ಕೆಲಸ ಮಾಡಿಕೊಂಡಿದ್ದು,1745ರಲ್ಲಿ ಅಂದರೆ 18ನೇ ಶತಮಾನದಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು.ಹೀಗೆ ಮತಾಂತರಗೊಂಡ ಅವರನ್ನು ದೇವಸಹಾಯಂ ಮತ್ತು ಲಜಾರಸ್ ಎಂದು ಎರಡು ಹೆಸರುಗಳಿಂದ ಕರೆಯಲಾಗುತ್ತಿತ್ತು.

ಕ್ರಾಂತಿಕಾರಿ ನಿಲುವು ಹೊಂದಿದ್ದ ದೇವಸಹಾಯಂ ಜಾತಿ ತಾರತಮ್ಯ, ಜಾತಿ ಪದ್ಧತಿ, ಕೋಮು ವಾದದ ವಿರುದ್ಧ ಹೋರಾಟಕ್ಕೆ ನಿಂತ ಪರಿಣಾಮ ಸಮಾಜದಿಂದ ಕಿರುಕುಳಕ್ಕೊಳಗಾದರಲ್ಲದೇ,ಕೆಲ ವರುಷಗಳ ಬಳಿಕ ಅವರ ಹತ್ಯೆಯೂ ನಡೆದು ಹೋಯಿತು.

ಸಂತ ಎಂದು ಘೋಷಿಸಲು ಕಾರಣವೇನು!?
ಗರ್ಭಿಣಿ ಮಹಿಳೆಯೊಬ್ಬರ ಮಗುವೊಂದು ಗರ್ಭದಲ್ಲಿಯೇ ಭ್ರೂಣ ಮೃತಪಟ್ಟ ವೇಳೆ ಆ ಮಹಿಳೆಯು ದೇವಸಹಾಯಂ ಅವರನ್ನು ನೆನೆಸಿಕೊಂಡಿದ್ದರು. ಹೀಗೆ ನೆನೆಸಿಕೊಂಡ ಅರೆಘಳಿಗೆಯಲ್ಲೇ ಗರ್ಭದಲ್ಲಿ ಮಗುವಿನ ಚಲನವಲನ ಪ್ರಾರಂಭವಾಗಿದ್ದು,ಇದೇ ಕಾರಣಕ್ಕಾಗಿ ಸಂತ ಎಂದು ಪೋಪ್ ಫ್ರಾಂನ್ಸಿಸ್ ಘೋಷಿಸಿದ್ದಾರೆ.

You may also like

Leave a Comment