Home » ಹಿಂದೂ ಎಂದು‌ ನಂಬಿಸಿ ಮದುವೆಯಾಗುವ ಭರವಸೆ ನೀಡಿ ಕೈ ಕೊಟ್ಟ ಮುಸ್ಲಿಂ ಯುವಕ | ಖಾಸಗಿ ಫೋಟೋಗಳನ್ನು ವೈರಲ್ ಮಾಡುವುದಾಗಿ 35 ಲಕ್ಷ ವಸೂಲಿಯೂ ಮಾಡಿದ್ದ!

ಹಿಂದೂ ಎಂದು‌ ನಂಬಿಸಿ ಮದುವೆಯಾಗುವ ಭರವಸೆ ನೀಡಿ ಕೈ ಕೊಟ್ಟ ಮುಸ್ಲಿಂ ಯುವಕ | ಖಾಸಗಿ ಫೋಟೋಗಳನ್ನು ವೈರಲ್ ಮಾಡುವುದಾಗಿ 35 ಲಕ್ಷ ವಸೂಲಿಯೂ ಮಾಡಿದ್ದ!

by Praveen Chennavara
0 comments

ಮಂಗಳೂರು: ಅನ್ಯಕೋಮಿನ ಯುವಕನೊಬ್ಬ ತಾನು ಹಿಂದೂ ಎಂದು ನಂಬಿಸಿ, ಮದುವೆಯಾಗುವ ಭರವಸೆ ನೀಡಿ ಯುವತಿಯೊಬ್ಬರನ್ನು ಹಲವು ಬಾರಿ ದೈಹಿಕ ಸಂಪರ್ಕಕ್ಕೆ ಬಳಸಿಕೊಂಡು, 35 ಲಕ್ಷ ಹಣ ಪಡೆದು ವಂಚಿಸಿರುವ ವಿಚಾರ ಬೆಳಕಿಗೆ ಬಂದಿದ್ದು, ಮಂಗಳೂರು ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ :ಮೈಸೂರು ಜಿಲ್ಲೆ ನಂಜನಗೂಡು ಮೂಲದ ಯುವತಿಯೊಬ್ಬರಿಗೆ ಕೊಣಾಜೆಯ ಮುಡಿಪು ಪರಿಸರದ ಮೊಹಮ್ಮದ್ ಅಜ್ಜಿನ್ ಎಂಬಾತ ಮೈಸೂರಿನಲ್ಲಿ ಪರಿಚಯವಾಗಿದ್ದು, ನಂತರ ತಾನು ಹಿಂದೂ ಧರ್ಮದ ವ್ಯಕ್ತಿಯೆಂದು ನಂಬಿಸಿದ್ದ. ಅಲ್ಲದೇ ಮದುವೆಯಾಗುವುದಾಗಿ ನಂಬಿಸಿದಾತ ಆ ಯುವತಿಯನ್ನು ಊಟಿಗೆ ಕರೆದೊಯ್ದು, ದೈಹಿಕ ಸಂಪರ್ಕ ನಡೆಸಿದ್ದ. ಅಲ್ಲದೇ ಈ ವೇಳೆ ಆ ಯುವತಿಯ ಅರೆ ನಗ್ನ ಫೋಟೋಗಳನ್ನು ತೆಗೆದಿದ್ದ ಎನ್ನಲಾಗಿದೆ.ನಂತರ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ 35 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಿದ್ದ.

ಆದರೆ ಹಣ ಪಡೆಯುತ್ತಲೇ ಅಜ್ಜಿನ್ ತನ್ನ ನಿಜ ಬುದ್ಧಿ ತೋರಿಸಿದ್ದು, ಮೈಸೂರಿನ ಕೆ.ಆರ್ ನಗರದಲ್ಲಿ ತಾನು ಕೆಲಸ ಮಾಡುತ್ತಿದ್ದ ಅಂಗಡಿ ಮಾಲಿಕನ ಮನೆಯಲ್ಲಿ ಯುವತಿಯ ಮೇಲೆ ಹಲ್ಲೆ ನಡೆಸಿದ್ದ. ಬಳಲಿದ ಯುವತಿಯನ್ನು ರೋಜಾ ಎಂಬವರು ಬಚಾವ್ ಮಾಡಿದ್ದರು ಎನ್ನಲಾಗಿದೆ. ಅಷ್ಟಕ್ಕೇ ಸುಮ್ಮನಾಗದ ನೀಚ ಬುದ್ಧಿಯ ಆರೋಪಿ ಅಜ್ಜಿನ್ ಸಂತ್ರಸ್ತ ಯುವತಿಗೆ ನಿಕೃಷ್ಟ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ದೂರಲಾಗಿದೆ.ಆದರೂ ಮೈಸೂರಿನಲ್ಲಿ ಆತ ನಾಪತ್ತೆಯಾದ ಬಳಿಕ ಮೊನ್ನೆ 21 ನೇ ತಾರೀಖಿನಂದು ಕೊಣಾಜೆ ಮುಡಿಪುವಿನಲ್ಲಿ ಇರುವ ಆತನ ಮನೆಗೆ ಬೆಳಿಗ್ಗೆ 11-00 ಗಂಟೆಗೆ ಹೋದ ಸಮಯದಲ್ಲಿ ಆತನ ಮನೆಯಲ್ಲಿ ಆತನ ಅಮ್ಮ, ಚಿಕ್ಕಮ್ಮ, ಆತನ ಅಪ್ಪ, ತಂಗಿ, ಅಕ್ಕರವರು ಜೊತೆಯಾಗಿ ಸಂತ್ರಸ್ತ ಯುವತಿಯ ಮೇಲೆ ಹಲ್ಲೆಗೈದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಕೋಣಾಜೆ ಪೋಲಿಸ್ ಠಾಣೆಗೆ ತೆರಳಿದ ಯುವತಿ, ಅಲ್ಲಿ ತನ್ನ ದೂರು ತೆಗೆದುಕೊಳ್ಳದ ಕಾರಣ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.ಸದ್ಯ ಆರೋಪಿಯ ವಿರುದ್ಧ ಪಾಂಡೇಶ್ವರ ಮಹಿಳಾ ಪೋಲಿಸ್ ಠಾಣೆಯಲ್ಲಿ Cr.no :69/2021 ಅನ್ವಯ ಸೆಕ್ಷನ್ 376,384,504,506, 417 r/w 149 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

You may also like

Leave a Comment