Hindu Muslim Marriage: ಪ್ರೀತಿಗೆ ಕಣ್ಣಿಲ್ಲ, ಅಂತೆಯೇ ಪ್ರೀತಿಗೋಸ್ಕರ ಕೆಲವರು ಏನು ಬೇಕಾದರೂ ತ್ಯಾಗ ಮಾಡಲು ಸಿದ್ದರಾಗುತ್ತಾರೆ. ಹಾಗೆಯೇ ಮಧ್ಯಪ್ರದೇಶದ ನರಸಿಂಗ್ಪುರದ ಮುಸ್ಲಿಂ ಯುವಕನೊಬ್ಬ, ಪ್ರೀತಿಸಿದವಳ ಕೈಹಿಡಿಯುವ ಸಲುವಾಗಿ ಹಿಂದೂ ಧರ್ಮ ಸ್ವೀಕರಿಸಿದ ಘಟನೆ ಬೆಳಕಿಗೆ ಬಂದಿದೆ.
ಹೌದು, ನರಸಿಂಗ್ಪುರ ನಿವಾಸಿಯಾಗಿರುವ ಫಾಜಿಲ್ ಖಾನ್ ತನ್ನ ಗೆಳತಿ ಸೋನಾಲಿ ಎಂಬಾಕೆಯನ್ನು ಬಹು ವರ್ಷಗಳಿಂದ ಪ್ರೀತಿಸುತ್ತಿದ್ದ. ಆದ್ದರಿಂದ ಪ್ರೀತಿದಾಕೆಯನ್ನು ವಿವಾಹವಾಗಲು ಬಯಸಿದ್ದ ಯುವಕ ಗುರುವಾರ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾನೆ. ಜೊತೆಗೆ ಈ ವೇಳೆ ತನ್ನ ಹೆಸರನ್ನು ಅಮನ್ ರೈ ಎಂದು ಬದಲಿಸಿಕೊಂಡಿದ್ದಾನೆ.
ಈಗಾಗಲೇ ಕರೇಲಿರಾಮ್ ದೇವಾಲಯದಲ್ಲಿ ಸೋನಾಲಿ ಹಾಗೂ ಅಮನ್ ರೈ ವಿವಾಹವು ನೆರವೇರಿದ್ದು, ಮದುವೆಗೆ ಎರಡು ಮನೆಯವರು ಸಾಕ್ಷಿಯಾಗಿದ್ದು, ಹಿಂದೂ ಶಾಸ್ತ್ರದಂತೆ ವಿವಾಹ ನೆರವೇರಿದೆ.
ಸದ್ಯ ದಂಪತಿಗಳು ಇದೀಗ ವಿವಾಹ ನೋಂದಣಿಗೆ ಅರ್ಜಿಯನ್ನು ಕೂಡ ಸಲ್ಲಿಸಿದ್ದಾರೆ. ಕುತೂಹಲಕಾರಿ ಅಂಶವೆಂದರೆ ಅಮನ್ ತಂದೆ ಮೊದಲು ಹಿಂದೂ ಆಗಿದ್ದರು ಎಂಬುದು. ಅಮನ್ ಅವರ ತಾಯಿ ಮುಸ್ಲಿಂ ಆಗಿದ್ದು, ಹಲವು ವರ್ಷಗಳ ಹಿಂದೆ ಹಿಂದೂ ಧರ್ಮವನ್ನು ತೊರೆದು ಇಸ್ಲಾಂಗೆ ಮತಾಂತರಗೊಂಡು (Hindu Muslim Marriage) ವಿವಾಹವಾಗಿದ್ದರು.
ಈ ಬಗ್ಗೆ ಮಾತನಾಡಿರುವ ಅಮನ್, ನನ್ನ ತಂದೆ ನನ್ನ ತಾಯಿಗಾಗಿ ಧರ್ಮವನ್ನು ಬದಲಾಯಿಸಿದ್ದರು. ನಾನು ನನ್ನ ಹೆಂಡತಿಗಾಗಿ ನನ್ನ ಧರ್ಮವನ್ನು ಬದಲಾಯಿಸಿದ್ದೇನೆ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ.
