Home » Waqf bill: ‘ಮುಸ್ಲಿಮರಿಗೆ ಅನ್ಯಾಯವಾಗುತ್ತಿದೆ’ ಎಂದು ವಕ್ಫ್ ಮಸೂದೆ ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹಿಂದೂ ಸಂಘಟನೆ!!

Waqf bill: ‘ಮುಸ್ಲಿಮರಿಗೆ ಅನ್ಯಾಯವಾಗುತ್ತಿದೆ’ ಎಂದು ವಕ್ಫ್ ಮಸೂದೆ ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹಿಂದೂ ಸಂಘಟನೆ!!

0 comments

Waqf bill: ಹಲವು ವಿವಾದ ಹಾಗೂ ವಿರೋಧಗಳ ನಡುವೆ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆಯಾಗಿ, ಬಹುಮತಗಳಿಂದ ಅಂಗೀಕಾರ ಕೂಡ ಆಗಿದೆ. ಇದನ್ನು ಮುಸ್ಲಿಂ ಸಂಘಟನೆಗಳು ವಿರೋಧಿಸುತ್ತಿದ್ದು ನಮಗೆ ಅನ್ಯಾಯವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ. ಆದರೆ ಅಚ್ಚರಿಯೇನೆಂದರೆ ಇದೀಗ ಹಿಂದೂ ಸಂಘಟನೆ ಎಂದು ಈ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ಹೌದು, ಕೇರಳದ ನಾರಾಯಣ ಗುರು ಧರ್ಮಂ ಟ್ರಸ್ಟ್‌, ವಕ್ಫ್‌ ತಿದ್ದುಪಡಿ ಮಸೂದೆಯಿಂದ ಮುಸ್ಲಿಮರಿಗೆ ಭಾರೀ ಅನ್ಯಾಯವಾಗುತ್ತದೆ ಎಂದು ಆರೋಪಿಸಿ ವಕ್ಫ್‌ ಮಸೂದೆ ತಿದ್ದುಪಡಿಯನ್ನು ವಿರೋಧಿಸಿ ಹಿಂದೂಪರ ಸಂಘಟನೆಯೊಂದು ಸುಪ್ರೀಂ ಕೋರ್ಟ್‌ ಕದ ತಟ್ಟಿದೆ.

ಕೋರ್ಟ್ ಕದ ಕಟ್ಟಿರುವ 2023 ರಲ್ಲಿ ಸ್ಥಾಪಿತಗೊಂಡ ಶ್ರೀ ನಾರಾಯಣ ಗುರು ಧರ್ಮಂ ಟ್ರಸ್ಟ್‌, ಸಮಾಜ ಸುಧಾರಕ, ಸಂತ ಶ್ರೀ ನಾರಾಯಣ ಗುರು ಅವರ ಸಂದೇಶಗಳ ಅಧ್ಯಯನ ಹಾಗೂ ಸುಧಾರಣಾವಾದವನ್ನು ಎತ್ತಿ ಹಿಡಿಯುವ ಉದ್ದೇಶ ಹೊಂದಿರುವ ಸಂಸ್ಥೆಯೆಂದು ಹೇಳಿಕೊಂಡಿದೆ.

You may also like