
ಗುರುವಾಯನಕೆರೆ: ಹಿಂದೂ ಸಂಗಮ ಆಯೋಜನಾ ಸಮಿತಿ, ಗುರುವಾಯನಕೆರೆ ಮಂಡಲದ ವತಿಯಿಂದ ಜ.18ರಂದು ಗುರುವಾಯನಕೆರೆ ನವಶಕ್ತಿ ಕ್ರೀಡಾಂಗಣದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ನೆರವೇರಿತು. ಗೋ ಮಾತೆಗೆ ಪೂಜೆ ಸಲ್ಲಿಸಿ, ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ನಮ್ಮ ಸನಾತನ ಧರ್ಮವನ್ನು, ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿದ್ದೇವೆ, ಹಿಂದೂಗಳಲ್ಲಿ ಯಾರೇ ಕೆಟ್ಟವರು ಅಥವಾ ಒಳ್ಳೆಯವರು ಇರಲಿ ನಮ್ಮ ಮನಸ್ಸಿನಲ್ಲಿ ನಾವೆಲ್ಲಾ ಹಿಂದೂಗಳು ಎನ್ನುವ ಭಾವನೆ ಇರಬೇಕು, ನಾಶವಾಗುತ್ತಿರುವ ಹಿಂದೂ ಧರ್ಮವನ್ನು ಉಳಿಸುವ ಕರ್ತವ್ಯ ನಮ್ಮ ಮೇಲಿದೆ.
ಹಿಂದೂ ಸಂಗಮವಾದರೆ ಜಗತ್ತು ಉದ್ದಾರವಾಗುತ್ತದೆ ಎಂದು ಮಾಣಿಲ ಮೋಹನ್ ದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ಸಭಾಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರಕ ನಂದೀಶ್ ಜಿ, ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಗೋಪಾಲ ಶೆಟ್ಟಿ, ಮೆಲಂತಬೆಟ್ಟು ನಾಗಬ್ರಹ್ಮ ದೇವಸ್ಥಾನದ ಅಧ್ಯಕ್ಷ ನಾರಾಯಣ ಪೂಜಾರಿ, ನಾಳ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಹರೀಶ್, ಮಂಗಳಗಿರಿ, ಶ್ರೀ ನಾಗ ಕಲ್ಲುರ್ಟಿ ಕ್ಷೇತ್ರ ಧರ್ಮದರ್ಶಿ ರಾಜೀವ್ ಸಾಲ್ಯಾನ್, ಶ್ರೀ ಕೊಡಮಣಿತ್ತಾಯ ದೇವಸ್ಥಾನ ಅರಮಲೆಬೆಟ್ಟ ಆಡಳಿತ ಮೊಕ್ತಸರ ಸುಕೇಶ್ ಕುಮಾರ್ ಜೈನ್, ಬೆಳ್ತಂಗಡಿ ಸುವರ್ಣ ಆರ್ಕೇಡ್ ಮಾಲಕ ನಾಣ್ಯಪ್ಪ ಪೂಜಾರಿ, ಮುಂಡೂರು ದುರ್ಗಾಪರಮೇಶ್ವರಿ ದೇವಸ್ಥಾನದ ರಮಾನಂದ ಸಾಲ್ಯಾನ್, ಬದಿನಡೆ ಸುರೇಂದ್ರ ಜೈನ್, ಪಿಲಿಚಾಮುಂಡಿ ದೈವಸ್ಥಾನ ಮೋಹನ್ ಭಟ್, ಪಾಡ್ಯಾರು ಮನೆಯ ಪ್ರವೀಣ್, ತಾಲೂಕು ಹಿಂದೂ ಸಂಗಮ ಆಯೋಜನ ಸಮಿತಿಯ ಅಧ್ಯಕ್ಷ ಅಜಿತ್ ಶೆಟ್ಟಿ ಕೋರ್ಯಾರು, ಉಪಾಧ್ಯಕ್ಷ ವಸಂತ ಮಜಲು, ಕಾರ್ಯದರ್ಶಿ ವಸಂತ ಮರಕಡ, ಸಹ ಕೋಶಾಧಿಕಾರಿ ಪ್ರಭಾಕರ್ ಉಪ್ಪಡ್ಕ, ಜೊತೆ ಕಾರ್ಯದರ್ಶಿ ಶ್ರೇಯಾ ಶೆಟ್ಟಿ ಉಪಸ್ಥಿತರಿದ್ದರು
ರಮಾನಂದ ಸಾಲ್ಯಾನ್, ಬದಿನಡೆ ಸುರೇಂದ್ರ ಜೈನ್, ಪಿಲಿಚಾಮುಂಡಿ ದೈವಸ್ಥಾನ ಮೋಹನ್ ಭಟ್, ಪಾಡ್ಯಾರು ಮನೆಯ ಪ್ರವೀಣ್, ತಾಲೂಕು ಹಿಂದೂ ಸಂಗಮ ಆಯೋಜನ ಸಮಿತಿಯ ಅಧ್ಯಕ್ಷ ಅಜಿತ್ ಶೆಟ್ಟಿ ಕೋರ್ಯಾರು, ಉಪಾಧ್ಯಕ್ಷ ವಸಂತ ಮಜಲು, ಕಾರ್ಯದರ್ಶಿ ವಸಂತ ಮರಕಡ, ಸಹ ಕೋಶಾಧಿಕಾರಿ ಪ್ರಭಾಕರ್ ಉಪ್ಪಡ್ಕ, ಜೊತೆ ಕಾರ್ಯದರ್ಶಿ ಶ್ರೇಯಾ ಶೆಟ್ಟಿ ಉಪಸ್ಥಿತರಿದ್ದರು.
ಗುರುವಾಯನಕೆರೆ ಹಿಂದೂ ಮಂಡಲ ಸಂಯೋಜಕರಾದ ಚಿದಾನಂದ ಇಡ್ಯಾ ಸ್ವಾಗತಿಸಿದರು. ಪ್ರಜ್ಞಾ ಓಡಿಲ್ನಾಳ ನಿರೂಪಣೆ ಮಾಡಿದರು.
