Home » Hindu Temple: 130 ವರ್ಷ ಪುರಾತನ ಹಿಂದೂ ದೇವಾಲಯ ನೆಲಸಮ ಮಾಡಿ ಮಸೀದಿ ನಿರ್ಮಾಣ!

Hindu Temple: 130 ವರ್ಷ ಪುರಾತನ ಹಿಂದೂ ದೇವಾಲಯ ನೆಲಸಮ ಮಾಡಿ ಮಸೀದಿ ನಿರ್ಮಾಣ!

0 comments

Hindu Temple: ಮಲೇಷ್ಯಾದ ಕೌಲಾಲಂಪುರದಲ್ಲಿ ಮಸೀದಿ ನಿರ್ಮಾಣಕ್ಕೆಂದು 130 ವರ್ಷ ಪುರಾತನ ದೇವಾಲಯವನ್ನು ನೆಲಸಮ ಮಾಡುವ ಕುರಿತು ವರದಿಯಾಗಿದೆ.

ಜಲನ್‌ ಇಂಡಿಯಾ ಬೀದಿಯಲ್ಲಿರುವ ಜಕೇಲ್‌ಮಲ್‌ ಎದುರಿಗಿರುವ ಪತ್ರಕಾಳಿಯಮ್ಮ ದೇವಸ್ಥಾನವನ್ನು ಕೆಡವಲು ನಿರ್ಧರ ಮಾಡಲಾಗಿದೆ. ಈ ಕುರಿತು ಹಿಂದೂಗಳು ನಡೆಸಿದ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ದೇವಾಲಯದ ನಿರ್ಮಾಣಕ್ಕೆ ಹೊಸ ಸ್ಥಳವನ್ನು ಕಂಡುಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಈ ದೇವಾಲಯವನ್ನು ಮಲೇಷ್ಯಾದ ಸ್ವಾತಂತ್ರ್ಯಕ್ಕೂ ಮೊದಲು ನಿರ್ಮಾಣ ಮಾಡಲಾಗಿತ್ತು. ಮಸೀದಿಯ ಶಿಲಾನ್ಯಾಸ ಸಮಾರಂಭ ಕೂಡಾ ಮಾಡಲಾಗಿದೆ. ಅಲ್ಲಿನ ಮಾಧ್ಯಮ ವರದಿಯ ಪ್ರಕಾರ, ಮಸೀದಿಯನ್ನು ಮಸೀದ್‌ ಮದನಿ ಎಂದು ಹೆಸರಿಡಲಾಗುವುದು ಎನ್ನಲಾಗಿದೆ. ದೇವಾಲಯದ ಅಧಿಕಾರಿಗಳು ಸಹಕರಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದೆ ಎಂದು ದೇವಾಲಯದ ಆಡಳಿತ ಮಂಡಳಿ ದೂರಿದೆ ಎನ್ನಲಾಗಿದೆ. ದೇವಾಲಯ ಕೆಡಹುವುದರ ಅಗತ್ಯವಿಲ್ಲ. ಪಕ್ಕದ ಜಾಗ ಮಸೀದಿ ನಿರ್ಮಾಣ ಮಾಡಲು ಸಾಕಷ್ಟು ಜಾಗವಿದೆ ಎಂದು ವಕೀಲರು ವಾದ ಮಾಡಿದ್ದಾರೆ.

You may also like