Home » ಮತ್ತೋರ್ವ ಹಿಂದೂಯೇತರ ನೃತ್ಯಗಾರ್ತಿಗೆ ದೇವಸ್ಥಾನದಲ್ಲಿ ಪ್ರದರ್ಶನ ನೀಡಲು ನಿರ್ಬಂಧ !! | ದೇವರ ನಾಡಲ್ಲಿ ಮರುಕಳಿಸುತ್ತಿದೆ ಅನ್ಯಧರ್ಮೀಯರ ಪ್ರತಿಭಾ ಪ್ರದರ್ಶನಕ್ಕೆ ತಡೆ

ಮತ್ತೋರ್ವ ಹಿಂದೂಯೇತರ ನೃತ್ಯಗಾರ್ತಿಗೆ ದೇವಸ್ಥಾನದಲ್ಲಿ ಪ್ರದರ್ಶನ ನೀಡಲು ನಿರ್ಬಂಧ !! | ದೇವರ ನಾಡಲ್ಲಿ ಮರುಕಳಿಸುತ್ತಿದೆ ಅನ್ಯಧರ್ಮೀಯರ ಪ್ರತಿಭಾ ಪ್ರದರ್ಶನಕ್ಕೆ ತಡೆ

0 comments

ಇತ್ತೀಚಿಗೆ ಹಿಂದೂಯೇತರ ನೃತ್ಯಗಾರ್ತಿಗೆ ದೇವಸ್ಥಾನದಲ್ಲಿ ನೃತ್ಯ ಪ್ರದರ್ಶನಕ್ಕೆ ತಡೆಯೊಡ್ಡಲಾಗಿತ್ತು. ಇದೀಗ ಅಂತಹುದೇ ಪ್ರಕರಣ ದೇವರ ನಾಡಲ್ಲಿ ಮರುಕಳಿಸಿದೆ. ಕೇರಳದ ಪ್ರಸಿದ್ಧ ಕೂಡಲ್ಮಾಣಿಕ್ಯಂ ದೇಗುಲದಲ್ಲಿ ಮತ್ತೊಬ್ಬ ಹಿಂದೂಯೇತರ ನೃತ್ಯಗಾರ್ತಿಗೆ ಪ್ರದರ್ಶನ ನೀಡಲು ನಿರಾಕರಿಸಲಾಗಿದೆ.

ಸೌಮ್ಯಾ ಸುಕುಮಾರನ್ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ್ದವರು ಎನ್ನುವ ಕಾರಣಕ್ಕೆ ಅವರಿಗೆ ಅವಕಾಶ ನೀಡಿಲ್ಲ. ಈ ಬಗ್ಗೆ ಸುದ್ದಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, 10 ದಿನಗಳ ಕಾಲ ನಡೆಯುವ ಉತ್ಸವದಲ್ಲಿ ನೃತ್ಯ ಪ್ರದರ್ಶನಕ್ಕೆ ಅವಕಾಶ ಕೊಡುವಂತೆ ನಾನು ಕೇಳಿದ್ದೆ. ಆದರೆ ನನಗೆ ಅವಕಾಶ ಕೊಡಲು ದೇವಸ್ಥಾನದ ಅಧಿಕಾರಿಗಳು ನಿರಾಕರಿಸಿದರು. ನನ್ನ ತಂದೆ ಹಿಂದೂ ಆಗಿದ್ದರು. ಮದುವೆಯಾದ ನಂತರ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಈ ವಿಷಯವನ್ನು ದೇವಸ್ಥಾನದ ಅಧಿಕಾರಿಗಳಿಗೆ ತಿಳಿಸಿದ್ದೆ ಎಂದರು.

ಈ ವಿಷಯ ತಿಳಿದ ಅಲ್ಲಿನ ಅಧಿಕಾರಿಗಳು ದೇವಸ್ಥಾನದ ಹೊರಗಿದ್ದರೆ ಯಾವುದೇ ತೊಂದರೆಯಾಗುತ್ತಿರಲಿಲ್ಲ. ಆದರೆ ಈ ಕಾರ್ಯಕ್ರಮವನ್ನು ಒಳಗೆ ನಡೆಸುವುದರಿಂದ ಕಷ್ಟವಾಗುತ್ತದೆ ಎಂದು ಹೇಳಿದರು. ಇದರಿಂದಾಗಿ ನಾನು ಹಿಂದೆ ಸರಿದೆ ಎಂದರು. ದೇವಸ್ಥಾನದ ಅಧಿಕಾರಿಗಳು ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಸೌಮ್ಯಾ ಅವರು ತಮ್ಮ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ದೇವಾಲಯವು ಹಿಂದೂಯೇತರರಿಗೆ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ವಿನಮ್ರವಾಗಿ ತಿಳಿಸಿದ್ದೇವೆ ಎಂದಿದ್ದಾರೆ.

ಇತ್ತೀಚೆಗಷ್ಟೇ ಕೇರಳದ ದೇವಸ್ಥಾನದ ಉತ್ಸವದಲ್ಲಿ ಕೇರಳದ ಕಲಾವಿದೆಗೆ ನೃತ್ಯ ಪ್ರದರ್ಶನ ನೀಡುವುದನ್ನು ನಿರ್ಬಂಧಿಸಲಾಗಿದೆ. ಮುಸ್ಲಿಂ ಧರ್ಮದವರು ಎಂಬ ಕಾರಣಕ್ಕೆ ದೇಗುಲದಲ್ಲಿ ನೃತ್ಯ ಮಾಡುವುದನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

You may also like

Leave a Comment