Pramod Muthalik : ಬಸವನಗೌಡ ಪಾಟೀಲ್ ಯತ್ನಾಳ್ ಅವರು ಹಿಂದು ಯುವಕ ಮುಸ್ಲಿಂ ಯುವತಿಯನ್ನು ಮದುವೆಯಾದರೆ 5 ಲಕ್ಷವನ್ನು ನೀಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಶ್ರೀರಾಮ ಸೇನೆಯ ಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಯತ್ನಾಳ್ ಅವರು 5,00,000 ನೀಡಿದರೆ ನಾವು ಮದುವೆ ಮಾಡಿಸಿ, ಕೆಲಸ ಕೊಡ್ತೀವಿ ಎಂದು ಘೋಷಿಸಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಮುತಾಲಿಕ್, ಮುಸ್ಲಿಂ ಯುವತಿಯನ್ನ ಪ್ರೀತಿಸಿದ್ದಕ್ಕೆ ಕೊಪ್ಪಳದಲ್ಲಿ ಹಿಂದು ಯುವಕನನ್ನ ಭೀಕರ ಕೊಲೆ ಮಾಡಲಾಗಿದೆ. ಮುಸ್ಲಿಂ ಯುವಕರು ಹಿಂದು ಯುವತಿಯರನ್ನ ಪ್ರೀತಿ ಮಾಡಿದ್ರೆ ನಾವು ಏನ್ ಮಾಡಬೇಕು. ನಾವು ದೇವಸ್ಥಾನದ ಮುಂದೆ ಕೊಲೆ ಮಾಡಬೇಕೇ..? ಎಂದು ಪ್ರಶ್ನೆಸಿದರು.
ಅಲ್ಲದೆ ಮುಸ್ಲಿಂ ಧರ್ಮ ಗುರುಗಳು ಮತ್ತು ಜಮೀರ ಅಹ್ಮದ್ ಅವರೇ ಬಾಯಲ್ಲಿ ಏನೂ ಇಟ್ಟುಕೊಂಡಿದ್ದಿರಿ..? ಹಿಂದು ಯುವಕರ ಕೊಲೆ ಇದೆಲ್ಲವೂ ಕಾಂಗ್ರೆಸ್ ಸರ್ಕಾರ ಕೃಪಾಪೋಷಿತ. ಮುಸ್ಲಿಂ ಯುವತಿಯರನ್ನ ಮದುವೆಯಾದ್ರೆ ಐದು ಲಕ್ಷ ಕೊಡುತ್ತೇನೆಂದ ಯತ್ನಾಳ ಹೇಳಿಕೆ ಸರಿ ಇದೆ. ಯತ್ನಾಳ ಐದು ಲಕ್ಷ ಕೊಟ್ಟ್ರೆ , ನಾವು ಮದುವೆ ಮಾಡಿಸಿ, ಕೆಲಸ ಕೊಡುತ್ತೀವಿ ಎಂದು ಮುತಾಲಿಕ್ ಹೇಳಿದ್ದಾರೆ.
