Home » ಹಿಟಾಚಿ ಯಂತ್ರ ಮಾಡಿತು ವ್ಯಕ್ತಿಯ ಶಿರಚ್ಛೇದ !!

ಹಿಟಾಚಿ ಯಂತ್ರ ಮಾಡಿತು ವ್ಯಕ್ತಿಯ ಶಿರಚ್ಛೇದ !!

0 comments

ತಮಿಳುನಾಡಿನಲ್ಲಿ ಕೆಲಸಗಾರನೋರ್ವ ದಿನನಿತ್ಯ ತಾನು ಆಪರೇಟ್ ಮಾಡುವ ಹಿಟಾಚಿಯಿಂದಾಗಿ ಸಾವು ಕಂಡಿದ್ದಾರೆ. ತಮಿಳುನಾಡಿನ ಮಧುರೈನ ರಾಮಮೂರ್ತಿ ನಗರದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಹಾಕಲು ಅಗೆದಿದ್ದ ಕಂದಕಕ್ಕೆ ಈರೋಡ್ ಜಿಲ್ಲೆಯ ಆರ್. ಸತೀಶ್ ಎಂಬಾತ ಕಾಲು ಜಾರಿ ಬಿದ್ದಿದ್ದ. ಆಗ ಭಯಭೀತರಾದ ಅವರ ಇತರ ಸಹೋದ್ಯೋಗಿಗಳು ಅಲ್ಲಿದ್ದ ಹಿಟಾಚಿಯ ಸಹಾಯದಿಂದ ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಪ್ರಕ್ರಿಯೆಯಲ್ಲಿ ಸತೀಶ್ ನ ಶಿರಚ್ಛೇದ ಆಗಿಹೋಗಿದೆ.

ಸತೀಶ್ ಖಾಸಗಿ ಗುತ್ತಿಗೆದಾರರ ಬಳಿ ಉದ್ಯೋಗಿಯಾಗಿದ್ದರು. ಅವರು ನೀರು ಹಾಯಿಸಲು ಉದ್ದೇಶಿಲಾಗಿದ್ದ ಪೈಪ್ ಹಾಕುವ ಉದ್ದೇಶದಿಂದ ತೋಡಲಾಗಿದ್ದ ಗುಂಡಿಗೆ ಬಿದ್ದಿದ್ದರು. ಆತ ಆ ಗುಂಡಿಯ ಒಳಗೆ ಪೂರ್ತಿ ಮುಳುಗಿದ್ದ, ಜೀವಂತವಾಗಿ ಸಮಾಧಿ ಮಾಡಿದಂತೆ ಒಳಗೆ ಹುದುಗಿದ್ದ. ಇದನ್ನೀಸ್ ಕಂಡ ಆತನ ಸಹವರ್ತಿಗಳು ಪೊಲೀಸರಿಗೆ ಕರೆ ಮಾಡುವುದನ್ನು ಬಿಟ್ಟು ತಮ್ಮ ಕೈಗೆ ಹಿಟಾಚಿ ಯಂತ್ರವನ್ನು ತೆಗೆದುಕೊಳ್ಳುತ್ತಾರೆ. ಕೂಡಲೇ ಸಡಿಲವಾದ ಮಣ್ಣನ್ನು ಅಗೆದು ತೆಗೆಯಲು ಶುರುಮಾಡುತ್ತಾರೆ. ಹೀಗೆ ಮಣ್ಣು ತೆಗೆಯುವ ಯಂತ್ರವು ಸಡಿಲವಾದ ಮಣ್ಣನ್ನು ತೆಗೆಯುತ್ತಿದ್ದಂತೆ ಹಿಟಾಚಿಯು ಒಳಗಿದ್ದ ಸತೀಶ್ ನ ತಲೆಯನ್ನು ಕೂಡಾ ಕತ್ತರಿಸಿ ಮಣ್ಣಿನ ಜತೆ ಮೇಲಕ್ಕೆ ತಂದಿದೆ. ಗಾಬರಿಯಲ್ಲಿ ತಮ್ಮ ಸಹೋದ್ಯೋಗಿಯ ಶಿರಚ್ಛೆಧವನ್ನು ತಾವೇ ಮಾಡಿದಂತೆ ಆಗಿದೆ.

You may also like

Leave a Comment