

ಕೊಪ್ಪಳ: ”ಕಳೆದ ವರ್ಷದ ಗಂಗಾವತಿ ತಾಲೂಕಿನ ಸಣಾಪುರದಲ್ಲಿ ನಡೆದ ವಿದೇಶಿ ಮಹಿಳೆಯೊಬ್ಬರ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಪ್ರವಾಸಿಯೊಬ್ಬರ ಕೊಲೆ ಕೇಸ್ ಸಣ್ಣದಾಗಿತ್ತು. ಆದರೆ ಮಾಧ್ಯಮಗಳು ವೈಭವೀ ಕರಿಸಿವೆ,” ಎಂಬ ಸಂಸದ ರಾಜಶೇಖರ್ ಹಿಟ್ನಾಳ್ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ.
ಮಾತನಾಡುವಾಗ ‘ಕೊಪ್ಪಳ ಅನ್ವೇಷಿಸಿ ಕಾರ್ಯಕ್ರಮ’ದಲ್ಲಿ ಇಂತಹ ಹೇಳಿಕೆ ನೀಡಿ, ಪ್ರಕರಣ ವೈಭವೀಕರಣ ಮಾಡಿದ್ದರಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಪೆಟ್ಟು ಬಿದ್ದಿದೆ,” ಎಂದು ಹೇಳಿದ್ದರು. “ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಶೇ.50 ರಷ್ಟು ಕುಸಿದಿದೆ,” ಎಂದಿದ್ದರು. ಜಾಲತಾಣದಲ್ಲಿ ಅವರ ಹೇಳಿಕೆ ವೈರಲ್ ಆದ ನಂತರ ಎಲ್ಲೆಡೆ ಪರ, ವಿರೋಧ ಚರ್ಚೆಗಳು ಮುನ್ನೆಲೆಗೆ ಬಂದಿವೆ.













