M Lakshman : ಬಿಜೆಪಿ ಶಾಸಕ ಮುನಿರತ್ನ ಅವರು ಎಚ್ಐವಿ ಇಂಜೆಕ್ಟ್ ಮಾಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಅವರ ಮೇಲೆ ಕೇಳಿ ಬಂದಿತ್ತು. ಈ ಎಲ್ಲಾ ಆರೋಪಗಳಿಂದ ಜಾಮೀನು ಪಡೆದು ಅವರು ಇದೀಗ ಹೊರ ಬಂದಿದ್ದಾರೆ. ಆದರೆ ಈ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಎಮ್ ಲಕ್ಷ್ಮಣ್(M Lakshman) ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.
ಹೌದು, ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರ ತುಟಿಯ ಬಣ್ಣ ಬಿಳಿಯಾಗಿ ಬದಲಾಗಿದ್ದು, ಶಾಸಕ ಮುನಿರತ್ನ ಹೆಚ್‌ಐವಿ ಇಂಜೆಕ್ಷನ್ ಇಂಜೆಕ್ಟ್ ಮಾಡಿಸಿರಬಹುದು ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ಸದ್ಯ ರಾಜಕೀಯ ವಲಯದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತಾಗಿ ಮಾತನಾಡಿದ ಕಾಂಗ್ರೆಸ್ ಮುಖಂಡ ಲಕ್ಷ್ಮಣ್ ಅವರು ‘ಬಿಜೆಪಿ ಶಾಸಕ ಮುನಿರತ್ನ ಎಚ್‌ಐವಿ ಇಂಜೆಕ್ಷನ್ ಕೊಟ್ಟಿರಬಹುದು. ಹೀಗಾಗಿ ಅಶೋಕ್ ಅವರ ದೈಹಿಕ ಹಾಗೂ ತುಟಿ ಮತ್ತು ಕೈ ಬಣ್ಣವೂ ಬದಲಾಗುತ್ತಿದೆ. ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಹನಿಟ್ರ್ಯಾಪ್ ವಿಚಾರವನ್ನು ಪ್ರಸ್ತಾಪಿಸಿ, ಬಿಜೆಪಿ ನಾಯಕರ ಸುಮಾರು 200 ಸಿಡಿಗಳು ಇರಬಹುದು. ಆ ಸಿಡಿಯ ಮಹಾನಾಯಕ ಶಾಸಕ ಮುನಿರತ್ನ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಅಲ್ಲದೇ ಮುನಿರತ್ನ ಅನೇಕರಿಗೆ ಹೆಚ್‌ಐವಿ ಇಂಜೆಕ್ಷನ್ ಕೊಟ್ಟಿದ್ದಾನೆ. ಬಾಂಬೇ ಬಾಯ್ಸ್ ಸಿಡಿಯೂ ಇರಬಹುದು. ಯಾವುದಕ್ಕೂ ಅವರು ಆರೋಗ್ಯವನ್ನು ತಪಾಸಣೆ ಮಾಡಿಕೊಳ್ಳಲಿ.. ಅದು ಅವರಿಗೂ ಒಳ್ಳೆಯದ್ದು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
