HMT Watch: ಕನ್ನಡಿಗರ ಹೆಮ್ಮೆ ಎನಿಸಿದ್ದ ಭಾರತದ ಪ್ರತಿಷ್ಠಿತ ವಾಚ್ ಕಂಪನಿಗಳಲ್ಲಿ ಒಂದಾಗಿರುವ, ಕನ್ನಡ ಅಂಕಿಯ ಗಂಡಬೇರುಂಡದ ಲಾಂಛನವಿರುವ ಎಚ್ಎಂಟಿ ವಾಚ್ ಇದೀಗ ಆನ್ಲೈನಲ್ಲಿ ಖರೀದಿಗೆ ಲಭ್ಯವಿದೆ.
ಹೌದು, ಎಚ್‌ಎಂಟಿ ಲಿಮಿಟೆಡ್ ವೆಬ್‌ಸೈಟ್‌ನಲ್ಲಿ ಗಂಡಭೇರುಂಡ ಸ್ಟೈಲ್‌ನ ಕನ್ನಡ ಅಂಕಿಯನ್ನು ಹೊಂದಿರುವ ವಾಚ್ ಮಾರಾಟಕ್ಕೆ ಬಂದಿದೆ. ಬಿಳಿ ಬಣ್ಣದ ವಾಚ್‌ಗೆ 2025 ರೂಪಾಯಿ ನಿಗದಿ ಮಾಡಲಾಗಿದ್ದು, ಸೋಲ್ಡ್ ಔಟ್ ಆಗುವ ಮುನ್ನ ಖರೀದಿಸಬಹುದು. 3 ರಿಂದ 5 ದಿನಗಳಲ್ಲಿ ಡೆಲಿವರಿಯಾಗಲಿದ್ದು, ಡೆಲಿವರಿ ಚಾರ್ಜ್ ರೂಪದಲ್ಲಿ 80 ರೂಪಾಯಿ ಪಾವತಿ ಮಾಡಬೇಕಿದೆ.
ಅಂದಹಾಗೆ ಎಚ್‌ಎಂಟಿಯ ಜನಪ್ರಿಯ ಬ್ರ್ಯಾಂಡ್‌ಗಳು 2016ರಲ್ಲಿ ಅಧಿಕೃತವಾಗಿ ಈ ಡಿವಿಷಿನ್ ಕ್ಲೋಸ್ ಆದರೂ, ಎಚ್‌ಎಂಟಿಯ ಗಂಡಭೇರುಂಡ ವಾಚ್‌ಗೆ ಈಗಲೂ ಕನ್ನಡಿಗರಿಂದ ಭಾರೀ ಮೆಚ್ಚುಗೆ ಗಳಿಸಿದೆ. ಆದರೆ, ಗಂಡಭೇರುಂಡ ವಾಚ್‌ಗಳನ್ನು ಖರೀದಿ ಮಾಡೋದು ಅಷ್ಟು ಸುಲಭವಲ್ಲ. ಆದರೂ ಕೂಡ ಇದು ಇದೀಗ ಆನ್ಲೈನ್ ನಲ್ಲಿ ಖರೀದಿಗೆ ಲಭ್ಯವಿದ್ದು, ಸೋಲ್ಡೌಟ್ ಆಗುವ ಮುನ್ನ ಖರೀದಿದಾರರು ಖರೀದಿಸಬಹುದು.
