ಬೆಂಗಳೂರು: ಸಂಕ್ರಾಂತಿ ಹಬ್ಬ ಕ್ಯಾಲೆಂಡರ್‌ನಲ್ಲಿ 14 ಕ್ಕೆ ಎಂದು ತೋರಿಸುತ್ತಿದ್ದರೆ ಸರಕಾರದ ರಜೆ ಪಟ್ಟಿಯಲ್ಲಿ ಜನವರಿ 15 ಕ್ಕೆ ರಜೆ ಘೋಷಣೆ ಮಾಡಲಾಗಿದೆ. ಹಾಗಾದರೆ ಈ ಬಾರಿ ಹಬ್ಬ ಆಚರಣೆ ಮಾಡುವುದು ಯಾವಾಗ? ಪೂಜೆಗೆ ಸರಿಯಾದ ಸಮಯ ಯಾವುದು? ಬನ್ನಿ ತಿಳಿಯೋಣ.
ಜ್ಯೋತಿಷ್ಯ ಶಾಸ್ತ್ರ ಮತ್ತು ದೃಕ್ ಪಂಚಾಂಗದ ಪ್ರಕಾರ, ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡುವುದು ಜನವರಿ 14, ಬುಧವಾರ ಮಧ್ಯಾಹ್ನ 3.13 ಕ್ಕೆ. ಸಂಪ್ರದಾಯದ ಪ್ರಕಾರ ಸೂರ್ಯಾಸ್ತದ ಮೊದಲ ಸಂಕ್ರಮಣ ಸಂಭವಿಸುವುದರಿಂದ ಜನವರಿ 14 ರಂದೇ ಹಬ್ಬದ ಪೂಜೆ, ಪುಣ್ಯಸ್ನಾನ ಮತ್ತು ದಾನ ಧರ್ಮ ಮಾಡುವುದು.
ಜನವರಿ 15 ರಂದು ಸರಕಾರಿ ರಜೆ ಇದ್ದರೂ ಹಬ್ಬದ ಧಾರ್ಮಿಕ ಆಚರಣೆಗಳು ಬುಧವಾರವೇ (ಜ.14) ನಡೆಯಲಿದೆ. ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನವನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ.
ಮಕರ ಸಂಕ್ರಾಂತಿ ಹಬ್ಬ: ಜನವರಿ 14
ಪುಣ್ಯಕಾಲ: ಮಧ್ಯಾಹ್ನ 3.13 ರಿಂದ ಸಂಜೆ 6.15 ರವರೆಗೆ
ಮಹಾಪುಣ್ಯ ಕಾಲ : ಮಧ್ಯಾಹ್ನ 3.13 ರಿಂದ ಸಂಜೆ 5.02 ರವರೆಗೆ
