Home » ಮನೆ ಮುಂದೆ ಮಲಗಿದ್ದವನ ಮೇಲೆ ಹರಿದ ಮರಳು ಸಾಗಾಟದ ಟಿಪ್ಪರ್ !! | ಯುವಕ ಸ್ಥಳದಲ್ಲೇ ದಾರುಣ ಸಾವು

ಮನೆ ಮುಂದೆ ಮಲಗಿದ್ದವನ ಮೇಲೆ ಹರಿದ ಮರಳು ಸಾಗಾಟದ ಟಿಪ್ಪರ್ !! | ಯುವಕ ಸ್ಥಳದಲ್ಲೇ ದಾರುಣ ಸಾವು

0 comments

ಮರಳು ಸಾಗಣೆ ಟಿಪ್ಪರ್ ಹರಿದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಲಿಂಗದಹಳ್ಳಿಯಲ್ಲಿ ನಡೆದಿದೆ.

ಮಾರುತಿ (19) ಮೃತ ಯುವಕ. ಬೇಸಿಗೆ ಹಿನ್ನೆಲೆಯಲ್ಲಿ ಮನೆ ಮುಂಭಾಗದಲ್ಲಿ ಮಲಗಿದ್ದ ಮಾರುತಿ ಟಿಪ್ಪರ್‌ಗೆ ಬಲಿಯಾಗಿದ್ದಾನೆ. ಹೊಲದಲ್ಲೇ ಮನೆ ಮಾಡಿಕೊಂಡು ಮಾರುತಿ ಕುಟುಂಬ ಕೃಷಿ ಕೆಲಸ ಮಾಡಿಕೊಂಡಿತ್ತು. ಇವರ ಮನೆ ಎದುರೇ ಮರಳು ಸಂಗ್ರಹಣೆ ಅಡ್ಡಾ ಇದ್ದು, ಹಗಲು ರಾತ್ರಿ ಮರಳು ಸಾಗಣೆ ನಡೆಯುತ್ತದೆ. ನಿನ್ನೆ ರಾತ್ರಿ ಮರಳು ಲೋಡ್ ಬಂದಿದ್ದ ವೇಳೆ ಘಟನೆ ನಡೆದಿದೆ.

ಮಂಜುನಾಥ್ ಹಾಗೂ ಹನುಮಂತ್ ಎನ್ನುವವರು ಅಕ್ರಮವಾಗಿ ಮರಳು ಸಂಗ್ರಹ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಹೊರಗಡೆ ಮಲಗಿದ್ದ ಮಾರುತಿ ಮೇಲೆ ರಾತ್ರಿ ಬಂದ ಟಿಪ್ಪರ್ ಹರಿದು ದುರ್ಘಟನೆ ನಡೆದಿದೆ.

ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

You may also like

Leave a Comment