Home » ಮನೆಯಲ್ಲಿ ಮಲಗಿದ್ದ 2 ತಿಂಗಳ ಹಸುಗೂಸನ್ನು ಎತ್ತಿಕೊಂಡು ಹೋದ ಕೋತಿಗಳು ಹೋಗಿ ಹಾಕಿದ್ದು ನೀರಿನ ಟ್ಯಾಂಕ್ ಗೆ !

ಮನೆಯಲ್ಲಿ ಮಲಗಿದ್ದ 2 ತಿಂಗಳ ಹಸುಗೂಸನ್ನು ಎತ್ತಿಕೊಂಡು ಹೋದ ಕೋತಿಗಳು ಹೋಗಿ ಹಾಕಿದ್ದು ನೀರಿನ ಟ್ಯಾಂಕ್ ಗೆ !

by Praveen Chennavara
0 comments

ಕಪಿಚೇಷ್ಠೆ ಮಾಡುವುದೇನೆಂದು ಎಲ್ಲರಿಗೂ ತಿಳಿದೇ ಇದೆ. ಯಾರಾದರೂ ತೀರಾ ಕಿತಾಪತಿ ಮಾಡಿದರೆ ಮನೆಮಂದಿ ಕಪಿಚೇಷ್ಟೆ ಮಾಡುತ್ತೀಯಲ್ಲಾ ಎಂದು ಗದರುತ್ತಾರೆ. ಅದಕ್ಕೆ ಕಾರಣ ಈ ಮಂಗಗಳು ಸದಾ ಏನಾದರೂ ಒಂದು ಕಿತಾಪತಿ ಮಾಡುತ್ತಲೇ ಇರುವುದರಿಂದ ಈ ರೀತಿ ಕರೆಯುವುದು ವಾಡಿಕೆ ಅಷ್ಟೇ. ಆದರೆ ಈ ಸಾರಿ ಕಪಿ ಚೇಷ್ಟೆ ವಿಕೋಪಕ್ಕೆ ಹೋಗಿ ಅದು ಅನಾಹುತವೊಂದಕ್ಕೆ ದಾರಿಯಾಗಿದೆ.

ಉತ್ತರಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಕೋತಿಗಳ ಗುಂಪೊಂದು ಎರಡು ತಿಂಗಳ ಮಗುವೊಂದನ್ನು ಅನಾಮತ್ತಾಗಿ ಎತ್ತಿಕೊಂಡು ಹೋಗಿ ನೀರಿಗೆ ಹಾಕಿದೆ.
ಹೌದು ಈ ಆಘಾತಕಾರಿ ಘಟನೆ ಭಾನುವಾರ ಬಾಗ್ ಪತ್ ನಲ್ಲಿ ನಡೆದಿದೆ.

ಮನೆಯಲ್ಲಿ ಮಲಗಿದ್ದ 2 ತಿಂಗಳ ಹಸುಗೂಸನ್ನು ಕೋತಿಗಳು ಹೊತ್ತೊಯ್ದು ನೀರಿನ ಟ್ಯಾಂಕ್ ಗೆ ಹಾಕಿರುವ ಘಟನೆ ಉತ್ತರಪ್ರದೇಶದ ಬಾಗ್ವತ್ ಎಂಬಲ್ಲಿ ನಡೆದಿದೆ.
ಈ ಘಟನೆಯಲ್ಲಿ ಮಗು ಸಾವನ್ನಪ್ಪಿದೆ.

ಅಜ್ಜಿಯೊಂದಿಗೆ ಟೆರೇಸ್ ನ ರೂಮ್ ನಲ್ಲಿ ಮಗು ಮಲಗಿತ್ತು.  ರೂಮ್ ನ ಬಾಗಿಲು ತೆರೆದೇ ಇತ್ತು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಕೋತಿಗಳ ಹಿಂಡು ಮಗುವನ್ನು ಅಜ್ಜಿಗೆ ಗೊತ್ತಾಗದಂತೆ ಎತ್ತಿಕೊಂಡು ಹೋಗಿದೆ.

ಅಜ್ಜಿ ಎಚ್ಚರವಾಗಿ ನೋಡಿದಾಗ ಮಗು ಕಾಣಿಸದೆ ಇರುವುದರಿಂದ ಗಾಬರಿಯಾಗಿದ್ದಾರೆ. ಎಲ್ಲಾ ಕಡೆ ಮಗುವನ್ನು ಹುಡುಕಾಡಿದ್ದಾರೆ.  ಆದರೆ ಮಗು ಸಿಗಲಿಲ್ಲ. ಕಡೆಗೆ ಮಗು ಮೃತದೇಹ ನೀರಿನ ಟ್ಯಾಂಕ್ ನಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

You may also like

Leave a Comment