Home » Home loan : ಬ್ಯಾಂಕಿನಲ್ಲಿ ‘ಹೋಂ ಲೋನ್’ ಪಡೆಯಲು ನಿಮ್ಮ ಸಂಬಳ ಎಷ್ಟಿರಬೇಕು?

Home loan : ಬ್ಯಾಂಕಿನಲ್ಲಿ ‘ಹೋಂ ಲೋನ್’ ಪಡೆಯಲು ನಿಮ್ಮ ಸಂಬಳ ಎಷ್ಟಿರಬೇಕು?

0 comments

Home Loan: ನಮ್ಮದೇ ಸ್ವಂತ ಮನೆ ಇರಬೇಕು, ಮನೆ ಕಟ್ಟಬೇಕು ಎಂಬುದು ಎಲ್ಲರ ಆಸೆ. ಆದರೆ ನಮ್ಮ ಅತ್ಯಲ್ಪಗಳಿಕೆ ಯಿಂದ ಕನಸು ಹಲವರಲ್ಲಿ ನನಸಾಗಿಯೇ ಉಳಿಯುತ್ತದೆ. ಆದರೆ ಅನೇಕರು ಬ್ಯಾಂಕಿನಲ್ಲಿ ಹೋಂ ಲೋನ್ ಪಡೆದು ತಮ್ಮದೇ ಆದ ಸೂರನ್ನು ನಿರ್ಮಿಸಿಕೊಳ್ಳುತ್ತಾರೆ. ಹಾಗಾದರೆ ಬ್ಯಾಂಕ್ ನಲ್ಲಿ ನೀವು ಹೋಂ ಲೋನ್ ಪಡೆಯಬೇಕಾದರೆ ನಿಮ್ಮ ಸಂಬಳ ಎಷ್ಟಿರಬೇಕು?

ನಿಮ್ಮ ಸಂಬಳ ಹೆಚ್ಚಿದ್ದರೆ ಮತ್ತು ನಿಮ್ಮ ಮಾಸಿಕ ವೆಚ್ಚಗಳು, ವಿಮೆ, ಉಳಿತಾಯ ಮತ್ತು ಇಎಂಐ ವೆಚ್ಚಗಳನ್ನು ನೀವು ಸುಲಭವಾಗಿ ಭರಿಸಬಹುದಾದರೆ, ನೀವು ಗೃಹ ಸಾಲದ ಮೇಲೆ ಮನೆ ಖರೀದಿಸಬಹುದು. ನೆನಪಿನಲ್ಲಿಡಬೇಕಾದ ಒಂದು ವಿಷಯವೆಂದರೆ ನಿಮ್ಮ ಮಾಸಿಕ EMI ನಿಮ್ಮ ಮಾಸಿಕ ಸಂಬಳದ 20 ರಿಂದ 25 ಪ್ರತಿಶತವನ್ನು ಮೀರಬಾರದು, ಅಂದರೆ ನಿಮ್ಮ ಸಂಬಳ ರೂ. 1 ಲಕ್ಷವಾಗಿದ್ದರೆ, ನಿಮ್ಮ ಇಎಂಐ ರೂ. 25,000 ಮೀರಬಾರದು.

ನೀವು ಎಷ್ಟು ಸಂಬಳದಲ್ಲಿ ಮನೆ ಖರೀದಿಸಬೇಕು?
ನಿಮ್ಮ ಸಂಬಳ ರೂ.1 ಲಕ್ಷವಾಗಿದ್ದರೆ, ನೀವು ರೂ.30 ರಿಂದ 35 ಲಕ್ಷ ಮೌಲ್ಯದ ಮನೆಯನ್ನು ಖರೀದಿಸಬಹುದು. ನಿಮ್ಮ ಸಂಬಳ ರೂ.1.50 ಲಕ್ಷವಾಗಿದ್ದರೆ, ನೀವು ರೂ.50 ಲಕ್ಷ ಮೌಲ್ಯದ ಮನೆಯನ್ನು ಖರೀದಿಸಬಹುದು

You may also like