Home » Dr Parameshwar: ಸುಹಾಸ್ ಶೆಟ್ಟಿ ಮನೆಗೆ ಭೇಟಿ ನೀಡದಿರಲು ಕಾರಣ ಕೊಟ್ಟ ಗೃಹ ಸಚಿವ ಪರಮೇಶ್ವರ್!!

Dr Parameshwar: ಸುಹಾಸ್ ಶೆಟ್ಟಿ ಮನೆಗೆ ಭೇಟಿ ನೀಡದಿರಲು ಕಾರಣ ಕೊಟ್ಟ ಗೃಹ ಸಚಿವ ಪರಮೇಶ್ವರ್!!

0 comments

Dr Parameshwar : ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾರ್ ಶೆಟ್ಟಿಯ ಬರ್ಬರ ಕೊಲೆ ನಡೆದ ಹಿನ್ನೆಲೆಯಲ್ಲಿ ಗೃಹ ಸಚಿವ ಪರಮೇಶ್ವರ್ ಅವರು ನಗರಕ್ಕೆ ಭೇಟಿ ನೀಡಿ ಸಾಲು ಸಾಲು ಸಭೆಗಳನ್ನು ನಡೆಸಿದ್ದರು. ಆದರೆ ಅವರು ಹತ ಸುಹಾಸ್ ಶೆಟ್ಟಿ ಮನೆಗೆ ಭೇಟಿ ನೀಡಲಿಲ್ಲ. ಇದಕ್ಕೆ ಕಾರಣ ಏನೆಂದು ಅವರು ತಿಳಿಸಿದ್ದಾರೆ.

ಹೌದು, ಸುಹಾಸ್ ಶೆಟ್ಟಿ ಅವರ ಮನೆಗೆ ಭೇಟಿ ನೀಡದಿರುವ ಬಗ್ಗೆ ಗೃಹ ಸಚಿವರು ಇಂದು ಕಾರಣ ತಿಳಿಸಿದ್ದು ಸುಹಾಸ್ ಶೆಟ್ಟಿ ಮೇಲೂ ಕೊಲೆ ಸೇರಿದಂತೆ ಐದು ಕೇಸ್‌ಗಳಿವೆ. ಹೀಗಾಗಿ, ನಾವು ಅವರ ಮನೆಗೆ ಭೇಟಿ ಕೊಟ್ಟಿಲ್ಲ. ಆದರೆ, ಸುಹಾಸ್ ಶೆಟ್ಟಿ ಮನೆಗೆ ನ್ಯಾಯ ಕೊಡಿಸುವ ಕೆಲಸ ಸರ್ಕಾರ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.

ಅಲ್ಲದೆ ನಿನ್ನೆ ಮುಸ್ಲಿಂ ಸಮುದಾಯದ ಪ್ರಮುಖರು ಅವರೇ ಬಂದು ನನ್ನ ಭೇಟಿ ಮಾಡಿದ್ರು. ಬರೋರಿಗೆ ಬೇಡ ಅನ್ನೋಕ್ಕಾಗುತ್ತಾ? ಬೇರೆ ಸಮುದಾಯದವರೂ ಬರಬಹುದಿತ್ತು. ಯಾರೂ ಬರಲಿಲ್ಲ ಎಂದರು.

You may also like