Home » ಗ್ರಾಹಕರ ಮನಸೂರೆಗೊಂಡ ಸ್ಕೂಟರ್‌ ಇದು ! ಕಳೆದ ತಿಂಗಳು ಬಿಗ್‌ ಸೇಲ್‌ ಕಂಡ ಈ ಸ್ಕೂಟರ್‌ನ ವಿಶೇಷತೆ ಇಲ್ಲಿದೆ!

ಗ್ರಾಹಕರ ಮನಸೂರೆಗೊಂಡ ಸ್ಕೂಟರ್‌ ಇದು ! ಕಳೆದ ತಿಂಗಳು ಬಿಗ್‌ ಸೇಲ್‌ ಕಂಡ ಈ ಸ್ಕೂಟರ್‌ನ ವಿಶೇಷತೆ ಇಲ್ಲಿದೆ!

0 comments

ಸದ್ಯ ಮಾರುಕಟ್ಟೆಗೆ ಹೊಚ್ಚ ಹೊಸ ವಾಹನಗಳು ಲಗ್ಗೆ ಇಡುತ್ತಿವೆ. ಅದರಲ್ಲಿ ಕೆಲವು ವಾಹನಗಳು ತಮ್ಮ ವಿಭಿನ್ನ ವಿನ್ಯಾಸ, ಫೀಚರ್, ಬೆಲೆಯಿಂದ ಅತಿ ಬೇಗನೆ ಮಾರಾಟವಾಗಿ, ಉತ್ತಮ ಎನಿಸಿರುತ್ತದೆ. ಇದೀಗ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್ ಬಗ್ಗೆ ಮಾಹಿತಿ ನೀಡಿದ್ದು, ಕಳೆದ ತಿಂಗಳು ಅಂದ್ರೆ ಜನವರಿಯಲ್ಲಿ ಹೋಂಡಾದ ಸ್ಕೂಟರ್ ಗಳ ಮಾರಾಟದ ವಿವರ ಇಲ್ಲಿದೆ.

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಜನವರಿ 2023 ರಲ್ಲಿ ಮಾರಾಟದ ವೆಹಿಕಲ್ ಮಾಹಿತಿಯನ್ನು ತಿಳಿಸಿದ್ದು, ಕಳೆದ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಜನವರಿಯಲ್ಲಿ ಈ ಕಂಪನಿಯ ಸ್ಕೂಟರ್ ಮಾರಾಟದಲ್ಲಿ 18.4 ಶೇಕಡಾ ಹೆಚ್ಚಳವಾಗಿದೆ. ಆದರೆ, ವಾರ್ಷಿಕ ಆಧಾರದಲ್ಲಿ ಇಳಿಮುಖ ಕಂಡಿದೆ.

ಹೋಂಡಾ ಜನವರಿಯಲ್ಲಿ 2,96,363 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದು, ವಾರ್ಷಿಕದಲ್ಲಿ 16 ಪ್ರತಿಶತದಷ್ಟು ಇಳಿಕೆಯಾಗಿದೆ. ಕಳೆದ ತಿಂಗಳು ದೇಶೀಯ ಮಾರುಕಟ್ಟೆಯಲ್ಲಿ 2,78,143 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ಉಳಿದ 18,220 ಯುನಿಟ್‌ಗಳನ್ನು ವಿದೇಶಕ್ಕೆ ರಫ್ತು ಮಾಡಲಾಗಿದೆ.

ತಿಂಗಳ ಆಧಾರದ ಮೇಲೆ ಡಿಸೆಂಬರ್ 2022 ಕ್ಕೆ ಹೋಲಿಕೆ ಮಾಡಿದರೆ ಜನವರಿ 2023 ರಲ್ಲಿ ಹೋಂಡಾದ ಮಾರಾಟದ ಕಾರ್ಯಕ್ಷಮತೆ ಉತ್ತಮವಾಗಿದೆ. ಜನವರಿ ತಿಂಗಳ ಮಾರಾಟದಲ್ಲಿ 18.4 ಶೇಕಡಾ ಹೆಚ್ಚಳವಾಗಿದೆ. ಡಿಸೆಂಬರ್ 2022 ರಲ್ಲಿ ಒಟ್ಟು 2,50,171 ಯುನಿಟ್‌ ಮಾರಾಟವಾಗಿದ್ದು, ಜನವರಿಯಲ್ಲಿ ಈ ಸಂಖ್ಯೆ ಹೆಚ್ಚಳವಾಗಿ 2,96,363 ಯುನಿಟ್‌ಗೆ ತಲುಪಿದೆ. ಡಿಸೆಂಬರ್ ಗಿಂತ ಜನವರಿ ತಿಂಗಳಿನಲ್ಲಿ ಮಾರಾಟ ಉತ್ತಮವಾಗಿದೆ.

ಜನವರಿ 2023 ರಲ್ಲಿನ ಸ್ಕೂಟರ್ ಮಾರಾಟದ ಬಗ್ಗೆ ಮಾತನಾಡಿದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ, ಅಧ್ಯಕ್ಷ ಮತ್ತು ಸಿಇಒ ಅಟ್ಸುಶಿ ಒಗಾಟಾ, HMSI ಇತ್ತೀಚೆಗೆ ತನ್ನ ಮೊದಲ OBD2 ಮಾಡೆಲ್ ಅನ್ನು ಪರಿಚಯಿಸಿದೆ. ಸರ್ಕಾರದ ಗಡುವಿನ ಮುನ್ನವೇ OBD2 ಮಾಡೆಲ್ ಅನ್ನು ಸ್ಮಾರ್ಟ್ ಕೀಯೊಂದಿಗೆ ಬಿಡುಗಡೆ ಮಾಡಲಾಗಿದ್ದು, ಹೋಂಡಾ ಶೀಘ್ರದಲ್ಲೇ ಹೊಸ ಮಾನದಂಡಗಳನ್ನು ಪೂರೈಸಲು ತನ್ನ ಇತರ ಪ್ರಾಡಕ್ಟ್ ಗಳನ್ನು ಅಪ್ಗ್ರೇಡ್ ಮಾಡಲಿದೆ ಎಂದು ಹೇಳಿದರು.

You may also like

Leave a Comment