1
Bangalore Stampede: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಭೀಕರ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾನವ ಹಕ್ಕುಗಳ ಆಯೋಗ ಸುಮೊಟೋ ಕೇಸ್ ದಾಖಲು ಮಾಡಲಾಗಿದೆ.
ಮಾನವ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡಿದೆ. ಪೊಲೀಸ್ ಆಯುಕ್ತ ಸೇರಿ ಮೂವರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮಾನವ ಹಕ್ಕುಗಳ ಆಯೋಗದ ಶ್ಯಾಂಭಟ್, ಸದಸ್ಯ ಸುರೇಶ್, ಡಿವೈಎಸ್ಪಿಗಳಾದ ಸುಧೀರ್ ಹೆಗ್ಡೆ, ಮೋಹನ್ ನೇತೃತ್ವದ ನಿಯೋಗ ಭೇಟಿ ಮಾಡಿ, ನಂತರ ಮಾತನಾಡುತ್ತಾ ಶ್ಯಾಂಭಟ್ ” ಕಾಲ್ತುಳಿತದಿಂದ 11 ಜನ ಮೃತಪಟ್ಟಿದ್ದು, 70 ಜನ ಗಾಯಗೊಂಡಿದ್ದಾರೆ. ಬೌರಿಂಗ್ ಮತ್ತು ವೈದೇಹಿಯಲ್ಲಿ ತಲಾ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಂಬುಲೆನ್ಸ್ ವ್ಯವಸ್ಥೆ ಇರಲಿಲ್ಲ. ಸರಿಯಾದ ಸಮಯಕ್ಕೆ ಗೇಟ್ ತೆಗೆದಿಲ್ಲ ಎನ್ನುವ ಮಾಹಿತಿ ದೊರಕಿದೆ, ಆಯೋಗದಿಂದ ಎರಡು ಕೇಸ್ ದಾಖಲು ಮಾಡಲಾಗಿದೆ” ಎಂದು ಹೇಳಿದರು.
