Home » Hospete : 80 ಜನ ಪ್ರಯಾಣಿಕರಿದ್ದ ಬಸ್ಸನ್ನು ಸೀದಾ ಪೊಲೀಸ್‌ ಠಾಣೆಗೆ ಕೊಂಡೊಯ್ದ ಡ್ರೈವರ್ ಮತ್ತು ಕಂಡಕ್ಟರ್ !! ಕಾರಣವೇ ವಿಚಿತ್ರ

Hospete : 80 ಜನ ಪ್ರಯಾಣಿಕರಿದ್ದ ಬಸ್ಸನ್ನು ಸೀದಾ ಪೊಲೀಸ್‌ ಠಾಣೆಗೆ ಕೊಂಡೊಯ್ದ ಡ್ರೈವರ್ ಮತ್ತು ಕಂಡಕ್ಟರ್ !! ಕಾರಣವೇ ವಿಚಿತ್ರ

5 comments

Hospete : 80 ಪ್ರಯಾಣಿಕರಿದ್ದ ಬಸ್‌ ಅನ್ನು ಚಾಲಕ ಹಾಗೂ ಕಂಡಕ್ಟರ್ ಸೀದಾ ಪೊಲೀಸ್‌ ಠಾಣೆಗೆ ತಂದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ. ಕಾರಣ ಎಂದೆಂದರೆ ಬಸ್ ನಲ್ಲಿ ನಡೆದ ಕಳ್ಳತನ.

 

ಹೌದು, ಅಂಬಮ್ಮ ಹೊಸಪೇಟೆ(Hospete) ಯಿಂದ ಕೊಪ್ಪಳಕ್ಕೆ ಸಾರಿಗೆ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. ಮುನಿರಾಬಾದ್‌ನಲ್ಲಿ 9 ಗ್ರಾಂ ಬಂಗಾರ ಕಳ್ಳತನ ಆಗಿರುವುದು ಗಮನಕ್ಕೆ ಬಂದಿದೆ. ಬಂಗಾರ ಕಳ್ಳತನವಾಗಿದೆ. ಕೂಡಲೇ ಬಸ್‌ ನಿಲ್ಲಿಸಿ ಎಂದು ಅಂಬಮ್ಮ ಹಾಗೂ ಮಗಳು ಕೂಗಾಡಿದ್ದಾರೆ.

 

ಮಹಿಳೆ ರಾದ್ಧಾಂತ ಹಿನ್ನಲೆ ಬಸ್ ಚಾಲಕ ಮತ್ತು ನಿರ್ವಾಹಕರು ಪ್ರಯಾಣಿಕರ ಸಮೇತ ಪೊಲೀಸ್ ಠಾಣೆಗೆ ಬಸ್ ತಂದಿದ್ದಾರೆ. ಹೊಸಪೇಟೆ ನಗರ ಠಾಣೆಗೆ ಬಸ್ ತರಲಾಗಿದ್ದು, ಪ್ರಯಾಣಿಕರ ತಪಾಸಣೆ ನಡೆಸಲಾಗಿದೆ. ಆದರೆ ಚಿನ್ನಾಭರಣ ಪತ್ತೆಯಾಗಿಲ್ಲ ಎನ್ನಲಾಗಿದೆ.

You may also like

Leave a Comment