1
Shivamogga: ರಾಜ್ಯದ್ಯಂತ ಎಡಬಿಡದೆ ಸುರಿಯುತ್ತಿರುವ ಮಳೆ ಕಾರಣ ಎಲ್ಲೆಡೆ ಅವಾಂತರಗಳು ಸೃಷ್ಟಿಯಾಗಿದ್ದು, ಭಾನುವಾರ ತಡರಾತ್ರಿ ಮನೆಯ ಗೋಡೆ ಕುಸಿತು ವೃದ್ದೆಯೊಬ್ಬರು ಮೃತ ಪಟ್ಟಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಜಿಲ್ಲೆಯ ಆಯನೂರು ತಾಲೂಕಿನ ಮಂಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಡುಗಡಿ ನಿವಾಸಿ ಆದಂತಹ ಸಿದ್ದಮ್ಮ ಗೋಡೆ ಕುಸಿತದಿಂದ ಸಾವನ್ನಪ್ಪಿದ್ದು, ಹೇಮಾವತಿ ಪರಶುರಾಮ್ ಪಲ್ಲವಿ ಚೇತನ್ ಎಂಬ ನಾಲ್ವರಿಗೆ ಗಾಯಗಳು ಆಗಿವೆ. ಹೇಮಾವತಿ ಎನ್ನುವವರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
