Home » Viral Video : ಎಷ್ಟು ಎಬ್ಬಿಸಿದರು ಏಳದ ಮಕ್ಕಳು – ಕೊನೆಗೆ ಬ್ಯಾಂಡ್ ಕರೆಸಿ, ಬಾರಿಸಿ ಎಚ್ಚರಿಸಿದ ತಾಯಿ !!

Viral Video : ಎಷ್ಟು ಎಬ್ಬಿಸಿದರು ಏಳದ ಮಕ್ಕಳು – ಕೊನೆಗೆ ಬ್ಯಾಂಡ್ ಕರೆಸಿ, ಬಾರಿಸಿ ಎಚ್ಚರಿಸಿದ ತಾಯಿ !!

0 comments

 

Viral Video : ಮನೆಯಲ್ಲಿ ಮಕ್ಕಳಿದ್ದರೆ ಕೆಲವರು ಬೇಗ ಎದ್ದು ಮನೆ ಕೆಲಸದಲ್ಲಿ ತೊಡಗಿಕೊಂಡು, ಮನೆಯವರಿಗೆ ಹಾಗೂ ಹೆತ್ತವರಿಗೆ ನೇರವಾಗುತ್ತಾರೆ. ಇನ್ನು ಕೆಲವರಂತೂ ಸೂರ್ಯವಂಶದವರು. ಅಂದರೆ ಸೂರ್ಯ ಹುಟ್ಟಿ, ನೆತ್ತಿಯ ಮೇಲೆ ಬಂದ ಮೇಲೆ ಅವರಿಗೆ ಎಚ್ಚರವಾಗುವುದು. ಇಂತಹ ಮಕ್ಕಳನ್ನು ಎಬ್ಬಿಸಿ ಎಬ್ಬಿಸಿ ಮನೆಯಲ್ಲಿ ಪೋಷಕರಿಗೆ ಸಾಕಾಗಿ ಹೋಗುತ್ತದೆ. ಅಂತೆಯೇ ಇಲ್ಲೊಂದು ಮನೆಯಲ್ಲಿ ಮಕ್ಕಳಿಬ್ಬರು ಇದೇ ರೀತಿ ಸೂರ್ಯವಂಶಸ್ಥರಾಗಿದ್ದು ಇವರನ್ನು ಎಬ್ಬಿಸಿ ಎಬ್ಬಿಸಿ ರೋಸಿ ಹೋದ ತಾಯಿ ಬ್ಯಾಂಡ್‌ಗೆ ಕರೆ ಮಾಡಿ ಕರೆಸಿ ಮಕ್ಕಳನ್ನು ಎಬ್ಬಿಸಿದ್ದಾಳೆ. ಸಧ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು, ಮಕ್ಕಳು ಬೆಳಗ್ಗೆಯಾಗಿದ್ದರೂ ಮಲಗೇ ಇದ್ದರು. ಆದ್ದರಿಂದ ಅವರ ತಾಯಿ ಅವರನ್ನು ಎಬ್ಬಿಸಲು ಬ್ಯಾಂಡ್‌ಗೆ ಕರೆ ಮಾಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬ್ಯಾಂಡ್ ಸದಸ್ಯರು ಮನೆಯ ಮೆಟ್ಟಿಲುಗಳನ್ನು ಹತ್ತುತ್ತಿರುವುದು ಕಂಡುಬರುತ್ತದೆ. ವಿಡಿಯೋ ಮಾಡುತ್ತಿರುವ ಮಹಿಳೆ ಅವರಿಗೆ ಈಗ ಪ್ಲೇ ಮಾಡಬೇಡಿ ಎಂದು ಹೇಳುತ್ತಾಳೆ. ಇದಾದ ನಂತರ, ಮಹಿಳೆ ಅವರನ್ನು ತನ್ನ ಮಕ್ಕಳು ಮಲಗಿರುವ ಕೋಣೆಗೆ ಕರೆದೊಯ್ಯುತ್ತಾಳೆ. ಕೋಣೆಗೆ ಪ್ರವೇಶಿಸಿದ ನಂತರ ಅವರು ಡ್ರಮ್ಸ್ ಇತ್ಯಾದಿಗಳನ್ನು ನುಡಿಸಲು ಪ್ರಾರಂಭಿಸುತ್ತಾರೆ. ಇದರಿಂದಾಗಿ ಮಕ್ಕಳು ಎಚ್ಚರಗೊಳ್ಳುತ್ತಾರೆ. ಆದರೆ ಅವರು ಮತ್ತೆ ಕಂಬಳಿಗಳಿಂದ ತಮ್ಮನ್ನು ಮುಚ್ಚಿಕೊಂಡು ಮಲಗುತ್ತಾರೆ. ಸ್ವಲ್ಪ ಸಮಯದ ನಂತರ ಓರ್ವ ಹುಡುಗಿ ಮಾತ್ರ ಎಚ್ಚರಗೊಳ್ಳುತ್ತಾಳೆ. ಆದರೆ ಇನ್ನೊಬ್ಬಳು ಅದನ್ನು ಲೆಕ್ಕಿಸುವುದೇ ಇಲ್ಲ.

https://www.instagram.com/reel/DQMSWeWiSYK/?igsh=MWY5amJzOWE2MXBnNg==

You may also like