Home » 7th Pay Commission: ಸರಕಾರಿ ನೌಕರರೇ ಇತ್ತ ಗಮನಿಸಿ, ಈ ಬಾರಿ ಡಿಎ ಹೆಚ್ಚಳ ಎಷ್ಟು ? ಇಲ್ಲಿದೆ ಮಾಹಿತಿ!

7th Pay Commission: ಸರಕಾರಿ ನೌಕರರೇ ಇತ್ತ ಗಮನಿಸಿ, ಈ ಬಾರಿ ಡಿಎ ಹೆಚ್ಚಳ ಎಷ್ಟು ? ಇಲ್ಲಿದೆ ಮಾಹಿತಿ!

2 comments
7th pay commission

7th Pay Commission: ಕೇಂದ್ರ ನೌಕರರು ಮತ್ತು ಪಿಂಚಣಿದಾರಿಗೆ ಸರಕಾರದ ವತಿಯಿಂದ ಸಿಹಿ ಸುದ್ಧಿ ಇಲ್ಲಿದೆ. ಜುಲೈನಲ್ಲಿ ಕೇಂದ್ರ ನೌಕರರಿಗೆ ಡಿಎ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಬಾರಿ ಜುಲೈ ತಿಂಗಳಲ್ಲಿ ಶೇ. 3ರಿಂದ 4ರಷ್ಟು ಡಿಎ (DA hike) ಹಾಗೂ ಡಿಆರ್ (DR) ಹೆಚ್ಚಳವಾಗಬಹುದು ಎನ್ನಲಾಗುತ್ತಿದೆ.

ವರ್ಷದಲ್ಲಿ ಎರಡು ಬಾರಿ ಡಿಎ ಏರಿಕೆ ಮಾಡಬೇಕೆಂದು 7ನೇ ವೇತನ ಆಯೋಗ (7th Pay Commission) ಕಡ್ಡಾಯಪಡಿಸುತ್ತದೆ. ಕಳೆದ ಕೆಲ ವರ್ಷಗಳಿಂದ ಸರ್ಕಾರ ವರ್ಷಕ್ಕೆರಡು ಬಾರಿ ಶೇ. 4ರಷ್ಟು ಡಿಎ ಹೆಚ್ಚಿಸುತ್ತಾ ಬಂದಿದೆ. ಪ್ರತೀ ವರ್ಷ ಜನವರಿ ಮತ್ತು ಜುಲೈ ತಿಂಗಳಲ್ಲಿ ಡಿಎ ಹೆಚ್ಚಳ ಮಾಡಲಾಗುತ್ತಿದೆ. ಜನವರಿಯಲ್ಲಿ ಡಿಎ ಶೇ. 4ರಷ್ಟು ಹೆಚ್ಚಾಗಿದ್ದು, ಈ ಹಿನ್ನೆಲೆ ಜುಲೈನಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ವರದಿಗಳ ಪ್ರಕಾರ, ಜುಲೈನಲ್ಲಿ ಹೆಚ್ಚಳವಾಗುವ ಡಿಎ ಶೇ. 3ರಿಂದ 4ರಷ್ಟಿರಬಹುದು. ಆದರೆ, ಈ ಬಗ್ಗೆ ಅಧಿಕೃತವಾಗಿ ಪ್ರಕಟಣೆ ಆಗಿಲ್ಲ. ಜುಲೈನಲ್ಲೇ ಡಿಎ ಹೆಚ್ಚಳ ನಿರ್ಧಾರ ತೆಗೆದುಕೊಳ್ಳಲಾಗಬಹುದು. ಜನವರಿಯಲ್ಲಿ ಪ್ರಕಟವಾಗಬೇಕಿದ್ದ ಡಿಎ ಹೆಚ್ಚಳದ ನಿರ್ಧಾರವನ್ನು ಮಾರ್ಚ್​ನಲ್ಲಿ ಘೋಷಿಸಲಾದಂತೆ ಜುಲೈನ ಡಿಎ ಹೆಚ್ಚಳ ಆಗಸ್ಟ್ ಅಥವಾ ಸೆಪ್ಟಂಬರ್ ತಿಂಗಳಲ್ಲೂ ಪ್ರಕಟಿಸುವ ಸಾಧ್ಯತೆಯೂ ಇದೆ.

ಈಗ ಸರ್ಕಾರಿ ನೌಕರರ (government employees) ಸಂಬಳದ ಜೊತೆಗೆ ಶೇ. 42ರಷ್ಟು ತುಟ್ಟಿಭತ್ಯೆ ಸಿಗುತ್ತಿದೆ. ಜುಲೈನಲ್ಲಿ ಶೇ. 4ರಷ್ಟು ಏರಿಕೆ ಆದರೆ ತುಟ್ಟಿಭತ್ಯೆ ಶೇ. 46 ಆಗುತ್ತದೆ. ತುಟ್ಟಿಭತ್ಯೆಯು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಸಂಬಳದ ಒಂದು ಅಂಶವಾಗಿದ್ದು, ಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ನಿಯತಕಾಲಿಕವಾಗಿ ಪರಿಷ್ಕರಣೆ ಮಾಡಲಾಗುತ್ತದೆ. ಆದರೂ, ಭಾರತದಾದ್ಯಂತ ಪ್ರತಿ ಸರ್ಕಾರಿ ಉದ್ಯೋಗಿಗೆ ಡಿಎ ಒಂದೇ ರೀತಿ ಇರುವುದಿಲ್ಲ. ಸದ್ಯ ಡಿಎ ಮತ್ತು ಡಿಆರ್ ಹೆಚ್ಚಳದಿಂದ 1.17 ಕೋಟಿಗೂ ಹೆಚ್ಚು ಮಂದಿಗೆ ಅನುಕೂಲವಾಗಲಿದೆ.

ದಿನ ಕಳೆದಂತೆ ಅಗತ್ಯವಸ್ತುಗಳ ಬೆಲೆ ಏರುತ್ತಲೇ ಇದೆ. ಹಾಗಾಗಿ ಜೀವನ ವೆಚ್ಚವೂ ಸಹಜವಾಗಿ ಏರುತ್ತದೆ. ಹಣದುಬ್ಬರವನ್ನು ಸರಿದೂಗಿಸಲು ನೌಕರರ ಸಂಬಳಕ್ಕೆ ತುಟ್ಟಿಭತ್ಯೆಯನ್ನು ಸೇರಿಸಿ ಕೊಡಬೇಕೆಂದು 7ನೇ ವೇತನ ಆಯೋಗ ಕಡ್ಡಾಯಪಡಿಸುತ್ತದೆ. ಡಿಎ ಇದೀಗ ಸೇವೆಯಲ್ಲಿರುವ ಸರ್ಕಾರಿ ನೌಕರರಿಗೆ ಅನ್ವಯವಾಗುತ್ತದೆ. ಡಿಯರ್ನೆಸ್ ಅಲೋಯನ್ಸ್ (ಡಿಆರ್) ನಿವೃತ್ತ ನೌಕರರ ಪಿಂಚಣಿಗೆ ಸೇರಿಸಿ ಕೊಡಲಾಗುತ್ತದೆ. ಇನ್ನು ಈ ವರ್ಷ ಹಣದುಬ್ಬರ ಕಡಿಮೆ ಆಗಿರುವುದರಿಂದ ಸರ್ಕಾರ ಡಿಎ ಎರಿಕೆಯನ್ನೂ ಅನುಗುಣವಾಗಿ ಕಡಿಮೆ ಮಾಡುವ ಸಾಧ್ಯತೆ ಇದೆ. ಜುಲೈನಲ್ಲಿ ಡಿಎ ಶೇ. 3ರಷ್ಟು ಏರಿಕೆಗೆ ಮಿತಿಗೊಳ್ಳಬಹುದು.

ಇದನ್ನೂ ಓದಿ:  ಕರ್ನಾಟಕ ಕೇಂದ್ರೀಯ ವಿದ್ಯಾಲಯದಲ್ಲಿ 50 ಪ್ರೊಫೆಸರ್‌, ಅಸೋಸಿಯೇಟ್‌ ಪ್ರೊಫೆಸರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ!

You may also like

Leave a Comment