Home » Alcohol: ಸರ್ಕಾರಿ ನಿಯಮದಲ್ಲಿ ನೀವು ಎಷ್ಟು ಮದ್ಯವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು?

Alcohol: ಸರ್ಕಾರಿ ನಿಯಮದಲ್ಲಿ ನೀವು ಎಷ್ಟು ಮದ್ಯವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು?

0 comments

Alcohol: ಮದ್ಯಪಾನ ಆರೋಗ್ಯಕ್ಕೆ (health) ಹಾನಿಕರ ಆಗಿದ್ದರು ಸಹ ಮದ್ಯಪಾನ ಪ್ರಿಯರು ಇದ್ದೇ ಇರುತ್ತಾರೆ. ಅಷ್ಟೇ ಅಲ್ಲ ಮದ್ಯ ಪ್ರಿಯರು ಕೆಲವರಿಗೆ ಮನೆಯಲ್ಲಿ ಮದ್ಯ ಸ್ಟಾಕ್ ಇಟ್ಟುಕೊಳ್ಳುವುದು ಅಭ್ಯಾಸ ಇರುತ್ತೆ. ಆದರೆ ಮನೆಯಲ್ಲಿ ಲೆಕ್ಕಕ್ಕಿಂತ ಹೆಚ್ಚಿನ ಮದ್ಯ ಕಂಡುಬಂದರೆ, ನಿಮ್ಮ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲಾಗುತ್ತದೆ. ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ. ಆದಕ್ಕಾಗಿ ನಿಮ್ಮ ಮನೆಯಲ್ಲಿ ಒಂದು ಸಮಯದಲ್ಲಿ ಎಷ್ಟು ಲೀಟರ್ ಮದ್ಯವನ್ನು ಸಂಗ್ರಹಿಸಬಹುದು ಎಂದು ಸರ್ಕಾರಿ ನಿಯಮದಲ್ಲಿ ಏನು ಹೇಳಿದೆ ಇಲ್ಲಿ ತಿಳಿಸಲಾಗಿದೆ.

ದೆಹಲಿಯಲ್ಲಿ ಒಬ್ಬ ವ್ಯಕ್ತಿಯು ಒಂದು ಅಥವಾ ಬೇರೆ ಬೇರೆ ಬ್ರಾಂಡ್‌ಗಳ 18 ಲೀಟರ್ ಮದ್ಯವನ್ನು ತನ್ನ ಮನೆಯಲ್ಲಿ ಏಕಕಾಲದಲ್ಲಿ ಇಟ್ಟುಕೊಳ್ಳಬಹುದು.ಅದಕ್ಕಿಂತ ಹೆಚ್ಚಿನ ಮದ್ಯ ಕಂಡುಬಂದರೆ, ಆ ವ್ಯಕ್ತಿ ಜೈಲು ಶಿಕ್ಷೆ ಆಗುತ್ತೆ.

ಇನ್ನು ಉತ್ತರ ಪ್ರದೇಶದಲ್ಲಿ, ಒಂದು ಸಮಯದಲ್ಲಿ ಒಂದೂವರೆ ಲೀಟರ್ ಮದ್ಯವನ್ನು ಇಟ್ಟುಕೊಳ್ಳಬಹುದು.

ರಾಜಸ್ಥಾನದಲ್ಲಿ ನೀವು 9 ಲೀಟರ್ IMFL ಮಾದರಿಯ ಮದ್ಯವನ್ನು ಸಂಗ್ರಹಿಸಬಹುದು.

ಪಂಜಾಬ್‌ನಲ್ಲಿ, ನೀವು ನಿಮ್ಮ ಮನೆಯಲ್ಲಿ ಒಂದು ಸಮಯದಲ್ಲಿ ಪ್ರತಿಯೊಂದು ರೀತಿಯ ಮದ್ಯದ ಎರಡು ಬಾಟಲಿಗಳನ್ನು ಇಟ್ಟುಕೊಳ್ಳಬಹುದು.

ಹರಿಯಾಣದಲ್ಲಿ, ಒಂದು ಸಮಯದಲ್ಲಿ 12 ಬಾಟಲಿ ಮದ್ಯವನ್ನು ಇಡಲು ಅನುಮತಿಸಲಾಗಿದೆ.

ಇದನ್ನೂ ಓದಿ:Asia Cup 2025: ಭಾರತ-ಪಾಕ್‌ ಸೂಪರ್‌ 4 ಪಂದ್ಯ: ಇಂದು ಎಷ್ಟು ಗಂಟೆಯಿಂದ ಆರಂಭ? ಯಾವುದರಲ್ಲಿ ನೋಡಬಹುದು?

ಭಾರತದಲ್ಲಿ(India), ಪ್ರತಿಯೊಂದು ರಾಜ್ಯವು ಮದ್ಯದ(alcohal) ಬಗ್ಗೆ ಬೇರೆ ಬೇರೆ ನಿಯಮಗಳನ್ನು ಹೊಂದಿದೆ. ಇನ್ನು ದೇಶದಲ್ಲಿ ಬಿಹಾರ, ಗುಜರಾತ್, ನಾಗಾಲ್ಯಾಂಡ್ ಮತ್ತು ಮಿಜೋರಾಂನಂತಹ ಕೆಲವು ರಾಜ್ಯಗಳು ಮದ್ಯದ ಮೇಲೆ ಸಂಪೂರ್ಣ ನಿಷೇಧವನ್ನು ಹೊಂದಿವೆ. ಆದ್ದರಿಂದ ಅಂತಹ ರಾಜ್ಯಗಳಲ್ಲಿ ಮನೆಯಲ್ಲಿ ಮದ್ಯವನ್ನು ಸಂಗ್ರಹಿಸುವ ಪ್ರಶ್ನೆಯೇ ಇಲ್ಲ. ಅದೇ ರೀತಿ, ಮಣಿಪುರ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

You may also like