Hanumantu : ಕನ್ನಡಿಗರ ಮನೆಮಗ ಹಳ್ಳಿ ಹೈದ ಹನುಮಂತು ಬಿಗ್ ಬಾಸ್ ಸೀಸನ್ 11 ವಿನ್ನರ್ ಆಗಿದ್ದಾರೆ. ಇದನ್ನು ಕನ್ನಡಿಗರೆಲ್ಲರೂ ಸಂಭ್ರಮಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಹನುಮಂತು ಮಾಡಿರುವ ಸಾಲ ಎಷ್ಟು ಎಂಬುದರ ಕುರಿತು ಚರ್ಚೆಯಾಗುತ್ತಿದೆ. ಈ ಕುರಿತು ಹನುಮಂತ ಅವರೇ ಉತ್ತರ ನೀಡಿದ್ದಾರೆ.
ಅಂದಹಾಗೆ ಬಿಗ್ ಬಾಸ್ ಫ್ಯಾಮಿಲಿ ವೀಕ್ ಏರ್ಪಡಿಸಿದ ಸಂದರ್ಭದಲ್ಲಿ ಹನುಮಂತು ಅವರ ಮನೆಯವರು ಬಂದಿದ್ದರು. ಈ ವೇಳೆ ಅವರು ಹನುಮಂತ ಜೊತೆ ಕಂತು ಕಟ್ಟಿಲ್ಲ ಎಂಬ ವಿಚಾರದ ಕುರಿತು ಪ್ರಸ್ತಾಪಿಸಿದ್ದರು. ಇದು ನಾಡಿನ ಜನತೆಗೆ ಬೇಸರ ಧರಿಸಿತ್ತು. ಆದರೆ ಈಗ ಹನುಮಂತ ಗೆದ್ದು ಬಳಿಕ ಬಹುಮಾನವಾಗಿ ದೊರೆತ ಹಣದಲ್ಲಿ ಸಾಲ ತೀರಬಹುದು ಎಂದು ಜನರು ಅಂದುಕೊಂಡಿದ್ದರು. ಈ ನಡುವೆ ಹನುಮಂತು ಅವರು ತಮ್ಮ ಸಾಲದ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಹೌದು, ಬಿಗ್ ಬಾಸ್ ವಿನ್ ಆದ ಹನುಮಂತು ಅವರನ್ನು ಮಾಧ್ಯಮಗಳು ಸಂದರ್ಶನ ಮಾಡುತ್ತಿವೆ. ಮಾಧ್ಯಮದವರೊಬ್ಬರು ನಿಮ್ಮ ಸಾಲ ಎಷ್ಟು ಇದೆ? ನಿಮ್ಮ ತಾಯಿ ಅವರು ಕಂತು ಕಟ್ಟಿಲ್ಲ ಎಂಬುದಾಗಿ ಬಿಗ್ ಬಾಸ್ ಮನೆಯಲ್ಲಿ ಮಾತನಾಡಿದ್ದರು. ಈಗ ಬಿಗ್ ಬಾಸ್ ಕೊಟ್ಟ ಹಣದಿಂದ ನಿಮ್ಮ ಸಾಲ ತೀರುತ್ತದೆಯೇ?ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಹನುಮಂತು ಅವರು ‘ಸಾಲಾನಾ..? ನಾನು ಸಾಲಾ ಮಾಡಿಯೇ ಇಲ್ಲ. ಸಾಲ ಕಟ್ಟುವ ವಿಷಯವೇ ಇಲ್ಲ. ಆದರೆ, ಕಳೆದ ಮೂರು ತಿಂಗಳಿನಿಂದ ಮನೆಯಲ್ಲಿಯೇ ಇದ್ದೆ ನೋಡಿ. ಆ ಸಮಯದಲ್ಲಿ ಒಂದಷ್ಟು ಕಂತು ಕಟ್ಟುವುದು ಉಳಿದಿದೆ ಎಂದರು.
ಅಸ್ಟೊತ್ತಿಗೆ ಹನುಮಂತು ನಿಮ್ಮ ಅಮ್ಮ ಏನೋ ಹೇಳಿದರಲ್ಲ. ಬಿಗ್ ಬಾಸ್ ಮನೆಗೆ ಬಂದಾಗ ಸಾಲ ಇದೆ. ಅದನ್ನ ಕಟ್ಟಬೇಕು ಅಂತ ಹೇಳಿದ್ದರಲ್ಲ. ಏನದು? ಎಂದಿದ್ದಕ್ಕೆ ಸಾಲಾ ಅಂತ ಏನೂ ಇಲ್ಲ. ಕಂತು ಕಟ್ಟುವುದಿದೆ. ಆ ಕಂತಿನ ಬಗ್ಗೆ ನಮ್ಮವ್ವ ಹೇಳಿದಳು. ಸಾಲಾ ಅಂತ ಏನೂ ಇಲ್ಲ ಅಂತಲೇ ಹನುಮಂತು ಉತ್ತರ ಕೊಟ್ಟಿದ್ದಾರೆ.
