Home » Gold Rate: ಒಂದು ವಾರದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಎಷ್ಟು ಬದಲಾವಣೆಯಾಗಿದೆ? 6 ವರ್ಷಗಳಲ್ಲಿ ಚಿನ್ನ ಶೇ. 200 ರಷ್ಟು ಏರಿಕೆ

Gold Rate: ಒಂದು ವಾರದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಎಷ್ಟು ಬದಲಾವಣೆಯಾಗಿದೆ? 6 ವರ್ಷಗಳಲ್ಲಿ ಚಿನ್ನ ಶೇ. 200 ರಷ್ಟು ಏರಿಕೆ

0 comments

Gold Rate: ಮನಿಕಂಟ್ರೋಲ್ ವರದಿ ಪ್ರಕಾರ, ಕಳೆದ ಒಂದು ವಾರದಲ್ಲಿ, 24 ಕ್ಯಾರೆಟ್ ಚಿನ್ನದ ಬೆಲೆ ₹1,420ರಷ್ಟು ಏರಿಕೆಯಾಗಿದೆ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ₹1,300ದಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಬೆಳ್ಳಿಯ ಬೆಲೆ ₹3,000ದಷ್ಟು ಕಡಿಮೆಯಾಗಿದೆ. ವರದಿಯ ಪ್ರಕಾರ, ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ₹1,01,500/10 , ಗ್ರಾಂ ಆಗಿದ್ದರೆ, ಮುಂಬೈನಲ್ಲಿ ₹1,01,350/10 ಗ್ರಾಂ ಆಗಿದೆ.

ಪ್ರಸ್ತುತ ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 92900 ರೂ.ಗಳಾಗಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 101350 ರೂ.ಗಳಾಗಿದೆ.

ಜೈಪುರ, ಲಕ್ಕೋ ಮತ್ತು ಚಂಡೀಗಢದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10ಗ್ರಾಂಗೆ 101500 ರೂ., 22 ಕ್ಯಾರೆಟ್ ಬೆಲೆ 10 ಗ್ರಾಂಗೆ 93050 ರೂ.

ಭೋಪಾಲ್ ಮತ್ತು ಅಹಮದಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಚಿಲ್ಲರೆ ಬೆಲೆ 10 ಗ್ರಾಂಗೆ 92950 ರೂ., 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 101400 ರೂ.

ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10ಗ್ರಾಂಗೆ 92900 ರೂ.ಗಳಾಗಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 101350 ರೂ.ಗಳಾಗಿದೆ.

6 ವರ್ಷಗಳಲ್ಲಿ ಚಿನ್ನ ಶೇ. 200 ರಷ್ಟು ಏರಿಕೆ

ಇತ್ತೀಚೆಗೆ ಕಳೆದ 6 ವರ್ಷಗಳಲ್ಲಿ ದೇಶದಲ್ಲಿ ಚಿನ್ನದ ಬೆಲೆ ಶೇ. 200 ರಷ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಮೋತಿಲಾಲ್ ಓಸ್ವಾಲ್ ಫೈನಾನ್ಸಿಯಲ್ ಸರ್ವೀಸಸ್ ಲಿಮಿಟೆಡ್ (MOFSL) ಚಿನ್ನದ ಕುರಿತ ವರದಿಯ ಪ್ರಕಾರ, ಮೇ 2019 ರಲ್ಲಿ, ಚಿನ್ನವು 10 ಗ್ರಾಂಗೆ 30,000 ರೂ.ಗಳಷ್ಟಿತ್ತು. ಆದರೆ ಜೂನ್ 2025 ರ ಹೊತ್ತಿಗೆ, ಬೆಲೆ 10 ಗ್ರಾಂಗೆ 1,00,000ರೂ.ಗಳಿಗಿಂತ ಹೆಚ್ಚಾಗಿದೆ. ಈ ವರ್ಷದ ಬಗ್ಗೆ ಹೇಳುವುದಾದರೆ, 2025 ರಲ್ಲಿ, ಮಲ್ಟಿ ಕಮಾಡಿಟಿ ಎಕ್ಟೇಂಜ್ (MCX) ನಲ್ಲಿ ಚಿನ್ನದ ಬೆಲೆ ಶೇ. 30 ಕ್ಕಿಂತ ಹೆಚ್ಚು ಹೆಚ್ಚಾಗಿದೆ.

ಬೆಳ್ಳಿ ದರ

ಮತ್ತೊಂದು ಅಮೂಲ್ಯ ಲೋಹ ಬೆಳ್ಳಿಯ ಬಗ್ಗೆ ಹೇಳುವುದಾದರೆ, ಒಂದು ವಾರದಲ್ಲಿ ಅದರ ಬೆಲೆ 3000 ರೂ.ಗಳಷ್ಟು ಕುಸಿದಿದೆ. ಆಗಸ್ಟ್ 3 ರಂದು ಬೆಳ್ಳಿ ಪ್ರತಿ ಕೆಜಿಗೆ 113000 ರೂ.ಗಳಷ್ಟಿತ್ತು. ಆಗಸ್ಟ್ 2 ರ ಶನಿವಾರ, ಇಂದೋರ್‌ನ ಬಲಿಯನ್ ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆ 1000 ರೂ.ಗಳಷ್ಟು ಹೆಚ್ಚಾಗಿದ್ದು, ಪ್ರತಿ ಕೆಜಿಗೆ 112800 ರೂ.ಗಳಿಗೆ ತಲುಪಿದೆ.

ಇದನ್ನೂ ಓದಿ: ನೇಹಾ ಹಿರೇಮಠ ಹತ್ಯೆ ಪ್ರಕರಣ; ಆರೋಪಿ ಫಯಾಜ್ ಜಾಮೀನು ಅರ್ಜಿ ತಿರಸ್ಕಾರ

You may also like