Rishab Shetty : ಕಾಂತಾರಾ ಚಿತ್ರದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಇತ್ತೀಚಿಗೆ ದೇಶಾದ್ಯಂತ ಖ್ಯಾತಿಗಳಿಸಿರುವ ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕುರಿತಾದ ಆ ಫೋಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಆದರೆ ಅವರು ಈ ಕಾರ್ಯಕ್ರಮದಲ್ಲಿ ಎಷ್ಟು ಹಣಗಳಿಸಿದರು ಎಂಬುದು ಎಲ್ಲರ ಯಕ್ಷಪ್ರಶ್ನೆಯಾಗಿದೆ. ಹಾಗಿದ್ದರೆ ಅದಕ್ಕೆ ಇಲ್ಲಿದೆ ನೋಡಿ ಉತ್ತರ.
ರಿಷಬ್ ಶೆಟ್ಟಿ ಅವರಿಗೆ ಮೊದಲ ಪ್ರಶ್ನೆ 50 ಸಾವಿರ ರೂಪಾಯಿಗೆ ಕೇಳಲಾಯಿತು. ‘ಲಾಫಿಂಗ್ ಬುದ್ಧ’ಗೆ ಸಂಬಂಧಿಸಿದಂತೆ ಪ್ರಶ್ನೆ ಇದಾಗಿತ್ತು. ಇದಕ್ಕೆ ಅವರು ಸರಿಯಾದ ಉತ್ತರ ಕೊಟ್ಟರು. ರಿಷಬ್ ಅವರು 12 ಪ್ರಶ್ನೆಗಳನ್ನು ಎದುರಿಸಿದರು. ‘ಇಂಡೋನೇಷ್ಯಾದಲ್ಲಿರುವ ಜೀವಂತ ಜ್ವಾಲಾಮುಖಿ ಕೆಳಗೆ ಹಿಂದೂ ದೇವರು ಇದೆ. ಅದು ಯಾವ ದೇವರು’ ಎಂದು ಕೇಳಲಾಯಿತು. ಇದಕ್ಕೆ ರಿಷಬ್ ಅವರು ಲೈಫ್ಲೈನ್ ತೆಗೆದುಕೊಂಡು, ‘ಗಣಪತಿ’ ಎಂದು ಸರಿಯಾದ ಉತ್ತರ ಕೊಟ್ಟರು. ಈ ಮೂಲಕ 12,50,000 ಸಾವಿರ ರೂಪಾಯಿ ಗೆದ್ದರು. ನಿಮ್ಮ ಫೌಂಡೇಷನ್ಗೆ ‘ಹಿರೋ ಎಕ್ಸ್ಟ್ರೀಮ್ 125’ ಬೈಕ್ ಕೂಡ ಸಿಗಲಿದೆ ಎಂದು ಅಮಿತಾಭ್ ಹೇಳಿದರು.
