Home » Sameer MD: ಸೌಜನ್ಯ ಕುರಿತ ಮೊದಲ ವಿಡಿಯೋದಿಂದ ಬಂದ ಹಣ ಎಷ್ಟು – ಮಾಹಿತಿ ಹಂಚಿಕೊಂಡ ಯೂಟ್ಯೂಬರ್ ಸಮೀರ್!!

Sameer MD: ಸೌಜನ್ಯ ಕುರಿತ ಮೊದಲ ವಿಡಿಯೋದಿಂದ ಬಂದ ಹಣ ಎಷ್ಟು – ಮಾಹಿತಿ ಹಂಚಿಕೊಂಡ ಯೂಟ್ಯೂಬರ್ ಸಮೀರ್!!

0 comments

Sameer MD : ಸುಮಾರು ಹದಿಮೂರು ವರ್ಷಗಳ ಹಿಂದೆ ಧರ್ಮಸ್ಥಳದ ಬಳಿಯ ನೇತ್ರಾವತಿಯಲ್ಲಿ ಭೀಕರವಾದ ಅತ್ಯಾಚಾರಕ್ಕೊಳಗಾಗಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸೌಜನ್ಯ ಪ್ರಕರಣ ಇಂದಿಗೂ ಬಗೆಹರಿದಿಲ್ಲ. ಈ ನಡುವೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಟ್ಯೂಬರ್ ಸಮೀರ್ ಎಂಡಿ ಮಾಡಿದ ವಿಡಿಯೋ ಬೃಹತ್ ಮಟ್ಟದಲ್ಲಿ ವೈರಲ್ ಆಗಿತ್ತು. ರಾಜ್ಯಾದ್ಯಂತ ಈ ವಿಡಿಯೋ ಕುರಿತು ಪರ ವಿರೋಧಗಳ ಚರ್ಚೆಯಾಗುತ್ತು. ಮರೆತು ಹೋಗಿದ್ದಂತಹ ಪ್ರಕರಣ ಮತ್ತೆ ಮುನ್ನಲೆಗೆ ಬಂದಿತ್ತು. ಈ ವಿಡಿಯೋದಿಂದ ಸಮೀರ್ ಅವರಿಗೆ ಬಂದ ಹಣದ ಕುರಿತಾಗಿಯೂ ಸಾಕಷ್ಟು ಜನ ಮಾತನಾಡಿಕೊಂಡಿದ್ದರು. ಆದರೆ ಈಗ ಈ ಕುರಿತು ಸಮೀರ್ ಅವರೇ ಮಾಹಿತಿ ನೀಡಿದ್ದು ತನ್ನ ಮೊದಲ ವಿಡಿಯೋದಿಂದ ಬಂದ ಹಣವೆಷ್ಟು ಎಂಬುದರ ಕುರಿತು ರಿವೀಲ್ ಮಾಡಿದ್ದಾರೆ.

 

 ಹೌದು, ಸೌಜನ್ಯ ಪ್ರಕರಣದ ಕುರಿತು ಮೊದಲು ವಿಡಿಯೋ ಮಾಡಿ ಹರಿಬಿಟ್ಟಿದ್ದ ಸಮೀರ್ ಅವರು ಇದೀಗ ಎರಡನೇ ವಿಡಿಯೋ ಒಂದನ್ನು ಮಾಡಿ ಮತ್ತೆ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರು ತನಗೆ ಯೂಟ್ಯೂಬ್ ನಿಂದ ಬಂದ ಹಣದ ಕುರಿತು ಮಾಹಿತಿ ನೀಡಿದ್ದಾರೆ.

 

ತಮ್ಮ ಎರಡನೇ ವಿಡಿಯೋದಲ್ಲಿ ಮಾತನಾಡಿರುವ ಸಮೀರ್ ಅವರು ನಿಜ ಹೇಳಬೇಕೆಂದರೆ ಆ ವಿಡಿಯೊ ವೈರಲ್ ಆದ ಕೂಡಲೇ ಹಣ ಗಣಿಸಲು ಯೋಗ್ಯವಲ್ಲ ಎಂದು ಯುಟ್ಯೂಬ್ ತಿರಸ್ಕರಿಸಿತು, ಹೀಗಾಗಿ ಅದರಿಂದ ನನಗೆ ಯಾವುದೇ ದುಡ್ಡು ಬಂದಿಲ್ಲ. ಅತ್ಯಾಚಾರಿ ಬೆಂಬಲಿಗರ ಯೋಚನೆ ನೋಡಿ, ಸೌಜನ್ಯಗೆ ನ್ಯಾಯ ಸಿಗುವುದಕ್ಕಿಂತ ವಿಡಿಯೊದಿಂದ ಎಷ್ಟು ದುಡ್ಡು ಬಂದಿರಬಹುದು ಎಂದು ಮಾತನಾಡುತ್ತಾರೆ ಎಂದು ಬೇಸರ ಹೊರಹಾಕಿದ್ದಾರೆ.

You may also like