Home » Hidden Camera: ಹೋಟೆಲ್‌ಗಳಲ್ಲಿ ಹಿಡನ್ ಕ್ಯಾಮೆರಾ ಪತ್ತೆಹಚ್ಚೋದು ಹೇಗೆ?

Hidden Camera: ಹೋಟೆಲ್‌ಗಳಲ್ಲಿ ಹಿಡನ್ ಕ್ಯಾಮೆರಾ ಪತ್ತೆಹಚ್ಚೋದು ಹೇಗೆ?

by ಹೊಸಕನ್ನಡ
0 comments

 

Hidden Camera: ಇತ್ತೀಚಿನ ದಿನಗಳಲ್ಲಿ ಹಿಡನ್ ಕ್ಯಾಮೆರಾ ದಿಂದ ಹಲವು ರೀತಿಯ ಅಪರಾಧ ಬೆಳಕಿಗೆ ಬಂದಿದೆ. ಬಹುತೇಕ ಜನರು ಹೋಟೆಲ್ (hotel) ಅಥವಾ ಅತಿಥಿ ಗೃಹದಲ್ಲಿ(restorent) ರಹಸ್ಯ ಕ್ಯಾಮೆರಾ ಪತ್ತೆಯಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ರಹಸ್ಯ ಕ್ಯಾಮರಾ ಗಳನ್ನು ಪತ್ತೆ ಮಾಡೋದು ಹೇಗೆ ಅನ್ನೋ ಟಿಪ್ಸ್ ಇಲ್ಲಿದೆ.

ಹಿಡನ್ ಕ್ಯಾಮೆರಾ ಪತ್ತೆಹಚ್ಚೋದು ಹೇಗೆ?ಲೈಟ್ ಆಫ್ ಮಾಡಿ ಪರಿಶೀಲನೆ

ಕೋಣೆಯ ಎಲ್ಲಾ ಲೈಟ್‌ಗಳನ್ನು ಆಫ್ ಮಾಡಿ, ಮೊಬೈಲ್ ಕ್ಯಾಮೆರಾ ಆನ್ ಮಾಡಿ ಸ್ಕ್ಯಾನ್ ಮಾಡಿದರೆ ಮಿನುಗುವ ಕೆಂಪು ಅಥವಾ ಹಸಿರು ಬೆಳಕು ಕಾಣುತ್ತದೆ. ಹೀಗಿದ್ದಲ್ಲಿ ಹಿಡನ್ ಕ್ಯಾಮೆರಾ ಇರುವ ಸೂಚನೆ.

ಕನ್ನಡಿಯ ಮುಂದೆ ಉಗುರು ಪರೀಕ್ಷೆ

ಕನ್ನಡಿಯ ಮೇಲೆ ಬೆರಳಿನ ಉಗುರು ಇಟ್ಟಾಗ ಪ್ರತಿಬಿಂಬದ ನಡುವೆ ಅಂತರವಿಲ್ಲದಿದ್ದರೆ ಅದು ದ್ವಿಮುಖ ಕನ್ನಡಿ ಆಗಿರಬಹುದು. ಇಂತಹ ಕನ್ನಡಿಗಳ ಹಿಂದೆ ಕ್ಯಾಮೆರಾ ಇರುವ ಸಾಧ್ಯತೆ ಹೆಚ್ಚು.

ಹೋಟೆಲ್ ವೈ-ಫೈ ಸ್ಕ್ಯಾನ್

ವೈ-ಫೈಗೆ (WiFi )ಸಂಪರ್ಕಿಸಿ “ಫಿಂಗ್” ಅಥವಾ ಇತರ ನೆಟ್‌ವರ್ಕ್ ಸ್ಕ್ಯಾನರ್ ಬಳಸಿದಾಗ ಅಪರಿಚಿತ ಕ್ಯಾಮೆರಾ ಸಾಧನಗಳು ಪತ್ತೆಯಾಗಬಹುದು.

ಫೋನ್ ಕರೆ ಮೂಲಕ ಪರೀಕ್ಷೆ

ವೈರ್‌ಲೆಸ್ ಕ್ಯಾಮೆರಾಗಳು ಫೋನ್ ಕರೆ ವೇಳೆ ಶಬ್ದ ವ್ಯತ್ಯಯ ಉಂಟುಮಾಡುತ್ತವೆ. ಕೊಠಡಿಯಲ್ಲಿ ನಡೆದು ಮಾತನಾಡಿದಾಗ ಕೆಲವು ಕಡೆ ಕ್ರ್ಯಾಕ್ಲಿಂಗ್ ಶಬ್ದ ಕೇಳಿಸಿದರೆ ಅಲ್ಲಿ ಕ್ಯಾಮರಾ ಇರುತ್ತದೆ.

ಫ್ಲ್ಯಾಶ್‌ಲೈಟ್ ಬಳಕೆ

ಮೊಬೈಲ್ ಫ್ಲ್ಯಾಶ್‌ಲೈಟ್ ಮಾಡಿದಾಗ ಕ್ಯಾಮೆರಾ ಲೆನ್ಸ್ ಬೆಳಕನ್ನು ಪ್ರತಿಫಲಿಸುತ್ತದೆ.

ಅಪ್ಲಿಕೇಶನ್‌ಗಳು

‘Hidden Camera Detector’, ‘Glint Finder’ ಅಥವಾ ನೆಟ್‌ವರ್ಕ್ ಸ್ಕ್ಯಾನರ್‌ಗಳಂತಹ ಅಪ್ಲಿಕೇಶನ್‌ಗಳು RF ಸಿಗ್ನಲ್‌ಗಳನ್ನು ಸಾಧನ ಪತ್ತೆ ಮಾಡುತ್ತವೆ.

You may also like