Home » Property Register: ತಂದೆಯ ಹೆಸರಲ್ಲಿರುವ ಮನೆಯನ್ನು ಮಕ್ಕಳ ಹೆಸರಿಗೆ ಮಾಡೋದು ಹೇಗೆ? ಇಲ್ಲಿದೆ ಈ ವಿಧಾನದ ಸಂಪೂರ್ಣ ವಿವರ!!

Property Register: ತಂದೆಯ ಹೆಸರಲ್ಲಿರುವ ಮನೆಯನ್ನು ಮಕ್ಕಳ ಹೆಸರಿಗೆ ಮಾಡೋದು ಹೇಗೆ? ಇಲ್ಲಿದೆ ಈ ವಿಧಾನದ ಸಂಪೂರ್ಣ ವಿವರ!!

by Mallika
1 comment
Property Register

Property Register: ಮನೆ (House), ಆಸ್ತಿಗಳೆಲ್ಲಾ (Property) ತಂದೆಯ ಹೆಸರಲ್ಲಿದ್ದರೆ, ಅವರಿಗೆ ವಯಸ್ಸಾದಾಗ ಮಕ್ಕಳ ಹೆಸರಿಗೆ ಮಾಡಲೇಬೇಕು. ಯಾಕಂದ್ರೆ ತಂದೆಗೂ ಆ ಆಸ್ತಿ ಅವರ ತಂದೆಯಿಂದ ಸಿಕ್ಕಿರುತ್ತದೆ. ಪೋಷಕರು ಮಕ್ಕಳ ಭವಿಷ್ಯಕ್ಕಾಗಿಯೇ ಆಸ್ತಿ-ಪಾಸ್ತಿ ಕೂಡಿಡುತ್ತಾರೆ. ಅದರಲ್ಲಿ ಪಿತ್ರಾರ್ಜಿತ ಆಸ್ತಿ (Inherited property) ಹಿರಿಯರ ಆಸ್ತಿ ಆಗಿರೋದ್ರಿಂದ ತಂದೆಯಿಂದ ಮಕ್ಕಳಿಗೆ ಸಿಗಲೇಬೇಕು. ಆದರೆ, ಸ್ವಯಾರ್ಜಿತ ಆಸ್ತಿ (Freehold property) ಹಾಗಲ್ಲ, ತಂದೆ ತಮ್ಮ ಸ್ವಂತ ದುಡಿಮೆಯಿಂದ ಗಳಿಸಿದ್ದು, ಹಾಗಾಗಿ ತಮ್ಮ ಮಕ್ಕಳಿಗೆ ಅಥವಾ ತಮಗಿಷ್ಟ ಬಂದವರಿಗೆ ಆಸ್ತಿ ನೀಡಬಹುದು.

ಆಸ್ತಿ ವಿಷಯದಲ್ಲಿ ಕಚೇರಿಗೆ ಸಾಕಷ್ಟು ಬಾರಿ ಓಡಾಡುವ ಪ್ರಮೇಯ ಬರುತ್ತದೆ. ಅಲ್ಲದೆ, ತಂದೆಯ ಹೆಸರಲ್ಲಿರುವ ಮನೆ, ಆಸ್ತಿಯನ್ನು ಮಕ್ಕಳ ಹೆಸರಿಗೆ ಮಾಡುವ ವಿಧಾನ ಕೆಲವರಿಗೆ ಗೊತ್ತಿರಲ್ಲ. ಈ ವಿಧಾನ ತಿಳಿದಿದ್ದರೆ ಇನ್ನಷ್ಟು ಬೇಗನೆ ಹಾಗೂ ಸುಲಭವಾಗಿ ಆಸ್ತಿ ವರ್ಗಾಯಿಸಬಹುದು. ಹಾಗಿದ್ದರೆ ಇಲ್ಲಿ ಕೇಳಿ, ಇಲ್ಲಿದೆ ಮನೆ, ಆಸ್ತಿ ವರ್ಗಾವಣೆಯ (Property Register) ವಿಧಾನದ ಸಂಪೂರ್ಣ ವಿವರ.

ಆಸ್ತಿ ವರ್ಗಾವಣೆ ಮೂರು ರೀತಿಯಲ್ಲಿ ಮಾಡಬಹುದು. ವಿಭಾಗದ ಮೂಲಕ, ದಾನ ಪತ್ರ ಬರೆಸುವ ಮೂಲಕ ಅಥವಾ ಕ್ರಯ ಮಾಡಿಕೊಡುವ ಮೂಲಕ ವರ್ಗಾಯಿಸಬಹುದು. ಸದ್ಯ ದಾನ ಪಾತ್ರದ ಮೂಲಕ ಹೆಚ್ಚಿನ ಜನರು ಆಸ್ತಿ ವರ್ಗಾಯಿಸುತ್ತಾರೆ. ಕಾರಣ, ನೋಂದಾವಣೆ ಕಡಿಮೆ ಖರ್ಚಿನಲ್ಲಿ ಆಗುತ್ತದೆ. ದಾನಪತ್ರದ ಮೂಲಕ ಕೇವಲ 4,000 – 5,000 ರೂಪಾಯಿ ಒಳಗಡೆ ಮಕ್ಕಳಿಗೆ ಆಸ್ತಿ ವರ್ಗಾವಣೆ ಮಾಡಬಹುದು.

ಇನ್ನು ಆಸ್ತಿ ವರ್ಗಾವಣೆಗೆ ಮನೆ ಹಕ್ಕು ಪತ್ರ, ಮನೆ ನಕ್ಷೆ, ತೆರಿಗೆ ರಶೀದಿ, ಪಂಚಾಯಿತಿಯಿಂದ ನೀಡಲಾಗುವ ಫಾರ್ಮ್ 11 ಮತ್ತು ಫಾರ್ಮ್ 9, ತಂದೆ ಮತ್ತು ಮಗನ ಆಧಾರ್ ಕಾರ್ಡ್ ಪ್ರತಿ ಸಾಕ್ಷಿಗಳ ಹಾಜರು ಮತ್ತು ಸಹಿ ಈ ಅಗತ್ಯ ದಾಖಲೆಗಳು ಬೇಕು.

ಆಸ್ತಿ ವರ್ಗಾವಣೆ ವಿಧಾನ :-
ನಿಮ್ಮ ಮನೆಗೆ ಸಂಬಂಧಿಸಿದ ಅಗತ್ಯ ದಾಖಲೆಗಳು ಅಂದ್ರೆ, ಮನೆ ನಿಮ್ಮದೇ ಎನ್ನುವುದಕ್ಕೆ ಸಾಕ್ಷಿ ಇರಬೇಕು. ಇಲ್ಲವೇ ಪಂಚಾಯಿತಿಯಲ್ಲಿ (Grama panchayath) ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು. ಈ- ಸ್ವತ್ತು ಮಾಡಿಸಿ ವರ್ಗಾವಣೆ ಮಾಡಬೇಕು. ನೋಂದಣಿ ಕಚೇರಿಗೆ ಭೇಟಿ ನೀಡಿ ಈ ಎಲ್ಲಾ ದಾಖಲೆಗಳನ್ನು ನೀಡಿ ನೋಂದಣಿ ಮಾಡಿಸಬೇಕು. ಅಲ್ಲಿ ತಿಳಿಸಿದ ದಿನದಂದು ತಂದೆ ಮಗ ಸಾಕ್ಷಿದಾರರು ಮುದ್ರಾಂಕದ ಹಾಳೆ ಮೇಲೆ ಮಗನಿಗೆ ಹಕ್ಕು ಪತ್ರ ವರ್ಗಾವಣೆ ಬಗ್ಗೆ ಮನೆಯ ಸಂಪೂರ್ಣ ವಿವರ ಹಾಗೂ ಚಕ್ಕುಬಂದಿ ಸೇರಿದಂತೆ ಇನ್ನಿತರೆ ಮಾಹಿತಿಯನ್ನು ದಾನಪತ್ರದಲ್ಲಿ ಬರೆಸಬೇಕು. ನೋಂದಣಿ ವೇಳೆ ಸಾಕ್ಷಿಗಳ ಹಾಜರಿ ಹಾಗೂ ಸಹಿ ಬೇಕು.

ತಾಲೂಕು ಉಪ ನೊಂದಣಿ ಕಚೇರಿಯಲ್ಲಿ ರಿಜಿಸ್ಟರ್ ಮಾಡಿಸಬೇಕು, ಈ ವೇಳೆ ಸರ್ಕಾರ ಸೂಚಿಸಿರುವ ಫೀಸ್ ಕಟ್ಟಬೇಕು. ರಿಜಿಸ್ಟರ್ ಆದ ನಂತರ ರಿಜಿಸ್ಟರ್ ಪತ್ರದ ಜೊತೆಗೆ ನಿಮ್ಮ ಗ್ರಾಮ ಪಂಚಾಯತ್ ಗೆ ತೆರಳಿ ಅಲ್ಲಿ ಖಾತೆ ಬದಲಾವಣೆಗೆ ಮತ್ತೆ ಅರ್ಜಿ ಸಲ್ಲಿಸಿ. ಪಂಚಾಯಿತಿ ಅಧಿಕಾರಿಗಳು ಅರ್ಜಿ ಪಡೆದು ಆಕ್ಷೇಪಣೆಗಾಗಿ ಪ್ರಚಾರ ಮಾಡಿಸುತ್ತಾರೆ. ನಂತರ ಖಾತೆ ಬದಲಾವಣೆ ಮಾಡಿ ಆದೇಶ ಹೊರಡಿಸುತ್ತಾರೆ. ಈ- ಸ್ವತ್ತು ಮೂಲಕ ತಂದೆಯಿಂದ ಮಗನಿಗೆ ಮನೆಯ ಹಕ್ಕು ಬದಲಾವಣೆ ಆಗುತ್ತದೆ. ಹಾಗಾಗಿ ರಿಜಿಸ್ಟರ್ ಮಾಡಿಸಿದ ನಂತರ ಮತ್ತೊಮ್ಮೆ ಈ -ಸ್ವತ್ತು ಮಾಡಿಸಲೇಬೇಕು. ಇಷ್ಟೇ ಈ ರೀತಿ ಮನೆ, ಆಸ್ತಿ ವರ್ಗಾಯಿಸಿ.

ಇದನ್ನೂ ಓದಿ: Vir Electric Bicycle: ಸಶಸ್ತ್ರ ಪಡೆಯ ಸಿಬ್ಬಂದಿಗಳಿಗಾಗಿ ಹೊಸ ‘ವೀರ್ ಬೈಕ್’ ಬಿಡುಗಡೆ!

You may also like

Leave a Comment