Home » Hubballi: ಫಯಾಜ್ ಮೊದಲೇ ನನ್ನ ಮಗಳನ್ನು ಕಿಡ್ನಾಪ್ ಮಾಡಲು ಸ್ಕೆಚ್ ಹಾಕಿದ್ದ – ಮತ್ತೊಂದು ಸತ್ಯ ಬಿಚ್ಚಿಟ್ಟ ನೇಹಾ ತಂದೆ !!

Hubballi: ಫಯಾಜ್ ಮೊದಲೇ ನನ್ನ ಮಗಳನ್ನು ಕಿಡ್ನಾಪ್ ಮಾಡಲು ಸ್ಕೆಚ್ ಹಾಕಿದ್ದ – ಮತ್ತೊಂದು ಸತ್ಯ ಬಿಚ್ಚಿಟ್ಟ ನೇಹಾ ತಂದೆ !!

0 comments
Hubballi

Hubballi: ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದೆ. ರಾಷ್ಟ್ರ ನಾಯಕರೇ ಈ ಪ್ರಕರಣ ಕಂಡು ದಂಗಾಗಿ ಹೋಗಿದ್ದಾರೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಹೊಸ ವಿಚಾರಗಳು ಬಯಲಾಗುತ್ತಿವೆ. ನೇಹಾ ಮನೆಯವರೇ ಕೆಲವೊಂದು ಮಾಹಿತಿ ಬಹಿರಂಗಪಡಿಸುತ್ತಿದ್ದಾರೆ.

ಇದನ್ನೂ ಓದಿ:  Shubman Gil : ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ದಾಖಲೆ ಕುಟ್ಟಿ ಪುಡಿಮಾಡಿದ ಶುಭ್ ಮನ್ ಗಿಲ್ 

ಹೌದು, ತನಿಖೆಗಾಗಿ CID ಅಧಿಕಾರಿಗಳು ಹುಬ್ಬಳ್ಳಿಯ(Hubballi) ನೇಹಾ ಮನೆಗೆ ಬಂದಿದ್ದರು. ಈ ವೇಳೆ ಫಯಾಜ್ (Fayaz) ನನ್ನ ಮಗಳನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದ ಎಂದು ಮೃತ ವಿದ್ಯಾರ್ಥಿನಿ ನೇಹಾ ಹಿರೇಮಠ (Neha Hiremath) ತಂದೆ ನಿರಂಜನ್ ಹಿರೇಮಠ (Niranjan Hiremath) ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಇದನ್ನೂ ಓದಿ:  Diamond: ವಜ್ರ ಹಾಗೂ ಭೂಮಿಗಿದೆ ಅನನ್ಯ ಸಂಬಂಧ : ವಜ್ರ ರೂಪುಗೊಳ್ಳಲು ಎಷ್ಟು ವರ್ಷ ಬೇಕು ಗೊತ್ತಾ?

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ನಾನು ಸಿಐಡಿ ಅಧಿಕಾರಿಗಳ ಗಮನಕ್ಕೆ ಎಲ್ಲಾ ವಿಷಯ ತಂದಿದ್ದೇನೆ. ಬುಧವಾರ ಫಯಾಜ್ ಮಹಜರು ಮಾಡಿರೋ ವಿಷಯ ಕೂಡಾ ತಿಳಿಸಿದ್ರು. ಫಯಾಜ್ ನನ್ನ ಮಗಳನ್ನ ಕಿಡ್ನಾಪ್ ಮಾಡಲು ಯತ್ನಿಸಿದ್ದ. ಕೆಲ ದಿನಗಳಿಂದ ಬೆದರಿಕೆ ಇತ್ತು. ಯಾರ್ಯಾರೋ ಬಂದು ವೀಡಿಯೋ ಮಾಡ್ತಿದ್ದಾರೆ. ನನ್ನ ಪತ್ನಿ ಇರುವ ಕೋಣೆಗೆ ಬಂದು ವೀಡಿಯೋ ಮಾಡಿದ್ದಾರೆ, ಇದು ನನಗೆ ಗೊತ್ತಾಗಿ ಬಳಿಕ ಆ ವೀಡಿಯೋ ಡಿಲೀಟ್ ಮಾಡಿಸಿದ್ದೇನೆ. ಅಲ್ಲದೆ ಕೆಲವು ವಿಷಯ ಬಹಿರಂಗ ಮಾಡೋಕೆ ಆಗಲ್ಲ ಎಂದರು.

ಅಂದಹಾಗೆ ನಿನ್ನೆ (ಏ25) ಸಿಎಂ ಸಿದ್ದರಾಮಯ್ಯನವರು ಮೃತಳಾ ನೇಹಾ ಮನೆಗೆ ಭೇಟಿ ನೀಡಿ ಅಪ್ಪ-ಅಪ್ಪನಿಗೆ ಸಾಂತ್ವಾನ ಹೇಳಿದ್ದಾರೆ. ತನಿಖೆ ಚುರುಕುಗೊಳಿಸಿ ಆದಷ್ಟು ಬೇಗ ನ್ಯಾಯ ಒದಗಿಸುವುದಾಗಿ ಹೇಳಿದ್ದಾರೆ. ಅಲ್ಲದೆ ಫಯಾಜ್ ಗೆ ಅತ್ಯಂತ ಕಠಿಣ ಶಿಕ್ಷೆಯನ್ನೇ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ.

You may also like

Leave a Comment