Home » Hubballi: ಹಿರಿಯ ವಿದ್ಯಾರ್ಥಿಗಳ ಬದಲಿಗೆ ಕಿರಿಯ ವಿದ್ಯಾರ್ಥಿಗಳು ಕ್ಲಾಸಿಗೆ ಹಾಜರ್‌!

Hubballi: ಹಿರಿಯ ವಿದ್ಯಾರ್ಥಿಗಳ ಬದಲಿಗೆ ಕಿರಿಯ ವಿದ್ಯಾರ್ಥಿಗಳು ಕ್ಲಾಸಿಗೆ ಹಾಜರ್‌!

0 comments
MBBS student death in Tumkur

Hubballi: ಹಿರಿಯ ವಿದ್ಯಾರ್ಥಿಗಳ ಬದಲಿಗೆ ಕಿರಿಯ ವಿದ್ಯಾರ್ಥಿಗಳು ಕ್ಲಾಸಿಗೆ ಹಾಜರಾಗಿದ್ದು, ಐವರು ಎಂಬಿಬಿಎಸ್‌ ವಿದ್ಯಾರ್ಥಿಗಳನ್ನು ಸಸ್ಪೆಂಡ್‌ ಮಾಡಿರುವ ಘಟನೆ ಹುಬ್ಬಳ್ಳಿಯ ಕಿಮ್ಸ್‌ ವೈದ್ಯಕೀಯ ಕಾಲೇಜು ಮಹಾವಿದ್ಯಾಲಯದಲ್ಲಿ ನಡೆದಿದೆ.

ಹುಬ್ಬಳ್ಳಿಯ ಕಿಮ್ಸ್‌ ಆಡಳಿತ ಮಂಡಳಿ ಐವರು ಎಂಬಿಬಿಎಸ್‌ ವಿದ್ಯಾರ್ಥಿಗಳ ವಿರುದ್ಧ ಶಿಸ್ತುಕ್ರಮ ಕೈಗೊಂಡಿದೆ. ಕೊನೆಯ ತರಗತಿ ನಡೆಯುತ್ತಿರುವ ಸಂದರ್ಭದಲ್ಲಿ ಕೆಲ ವಿದ್ಯಾರ್ಥಿಗಳನ್ನು ಅಂತಿಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳು ಹೆದರಿಸುತ್ತಿದ್ದರು. ತಮ್ಮ ಪರವಾಗಿ ತರಗತಿಗಳಿಗೆ ಹಾಜರಾಗಿ ಎಂದು ಸೂಚನೆ ನೀಡುತ್ತಿದ್ದರು. ಈ ಮಾಹಿತಿ ತಿಳಿದು ಆ ಭಾಗದ ಸಹಾಯಕ ಪ್ರಾಧ್ಯಾಪಕರು ವಿಚಾರಿಸಿದ್ದರು.

ರ್ಯಾಗಿಂಗ್‌ ನಿಯಂತ್ರಕ ಸಮಿತಿಗೆ ಈ ಕುರಿತು ವರದಿ ನೀಡಲಾಗಿತ್ತು. ಘಟನೆ ಕುರಿತು ಸಂಪೂರ್ಣ ವರದಿ ನೀಡುವಂತೆ ಕಿಮ್ಸ್‌ ನಿರ್ದೇಶಕ ಡಾ.ಎಸ್‌.ಎಫ್‌ ಕಮ್ಮಾರ ಸೂಚನೆ ನೀಡಿದ್ದರು. ವರದಿ ಆಧರಿಸಿ ಐವರು ವಿದ್ಯಾರ್ಥಿಗಳನ್ನು ಒಂದು ತಿಂಗಳ ಕಾಲ ಕಾಲೇಜಿನಿಂದ ಸಸ್ಪೆಂಡ್‌ ಮಾಡಲಾಗಿದೆ.

You may also like