Home » Hubballi: ಯಪ್ಪಾ.. 23 ಪಾರಿವಾಳಗಳ ರುಂಡ ಚೆಂಡಾಡಿದ ಪಾಪಿ – ಕಾರಣ ಕೇಳಿದ್ರೆ ನೀವೇ ಶಾಕ್

Hubballi: ಯಪ್ಪಾ.. 23 ಪಾರಿವಾಳಗಳ ರುಂಡ ಚೆಂಡಾಡಿದ ಪಾಪಿ – ಕಾರಣ ಕೇಳಿದ್ರೆ ನೀವೇ ಶಾಕ್

0 comments

Hubballi: ಹುಬ್ಬಳ್ಳಿಯಲ್ಲಿ(Hubballi)ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ 23 ಪಾರಿವಾಳಗಳ ಕುತ್ತಿಗೆಯನ್ನು ಕತ್ತರಿಸಿ ಬಿಸಾಡಿದ ಹೇಯ ಕೃತ್ಯವೊಂದು ವರದಿಯಾಗಿದೆ.

ಹುಬ್ಬಳ್ಳಿಯ ಗೋಕುಲ ರಸ್ತೆಯ ಯಾವಗಲ್ ಪ್ಲಾಟ್ ನಲ್ಲಿ ವೈಯಕ್ತಿಕ ದ್ವೇಷದ (Personal Revenge)ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಮತ್ತೊಬ್ಬ ಸಾಕಿದ 23 ಪಾರಿವಾಳಗಳ(Pigeon)ಕುತ್ತಿಗೆಯನ್ನು ಚಾಕುವಿನಿಂದ ಕತ್ತರಿಸಿ ರುಂಡ-ಮುಂಡ ಬೇರ್ಪಡಿಸಿ ವಿಕೃತಿ ಮೆರೆದ ಘಟನೆ ವರದಿಯಾಗಿದೆ.

ಕಳೆದ ಆರು ತಿಂಗಳಿಂದ ರಾಹುಲ್ ದಾಂಡೇಲಿ ಎನ್ನುವವರು ಮನೆಯ ಬಳಿ ಕಪಾಟಿನಲ್ಲಿ ಸಾಕಿದ್ದ 23 ಪಾರಿವಾಳಗಳನ್ನು ಕಿಡಿಗೇಡಿಗಳು ಕೊಂದು ವಿಕೃತಿ ಮೆರೆದ ಘಟನೆ ನಡೆದಿದೆ. ರಾಹುಲ್ ಸಾಕಿದ್ದ ಪಾರಿವಾಳಗಳಲ್ಲಿ ಕೆಲವನ್ನು ಮಾರಾಟ ಮಾಡಿ ಆದಾಯ ಪಡೆದರೆ, ಮತ್ತೆ ಕೆಲ ಪಾರಿವಾಳಗಳನ್ನು ಹಾರಾಟ ಮಾಡಿಸುವ ಜೊತೆಗೆ ಜೂಜಾಟವನ್ನೂ ಮಾಡಿ ಆದಾಯ ಪಡೆಯುತ್ತಿದ್ದರು ಎನ್ನಲಾಗಿದೆ.

ರಾಹುಲ್‌ ಮೇಲೆ ಇದ್ದ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿ ರಾಹುಲ್ ಮನೆಯಲ್ಲಿ ಸಾಕಿದ್ದ ಪಾರಿವಾಳಗಳ ಕತ್ತು ಕತ್ತರಿಸಿ ಎಸೆಯುವ ಮೂಲಕ ದ್ವೇಷಕ್ಕೆ ಪ್ರತೀಕಾರ ತೀರಿಸಿಕೊಂಡಿದ್ದಾನೆ ಎನ್ನಲಾಗಿದೆ.ಪಾರಿವಾಳಗಳನ್ನು ಅಮನುಷವಾಗಿ ಕೊಂದ ಪಾಪಿಗಳನ್ನು ಕೂಡಲೇ ಬಂಧಿಸುವಂತೆ ಹುಬ್ಬಳ್ಳಿಯ ಉಪನಗರ ಠಾಣೆಯಲ್ಲಿ ರಾಹುಲ್‌ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.

You may also like

Leave a Comment