Home » Davangere: ಅಡಿಕೆ ದರದಲ್ಲಿ ಭರ್ಜರಿ ಏರಿಕೆ

Davangere: ಅಡಿಕೆ ದರದಲ್ಲಿ ಭರ್ಜರಿ ಏರಿಕೆ

0 comments

Davangere : ರಾಜ್ಯದಲ್ಲಿ ವಿವಿಧ ವಸ್ತುಗಳ ಬೇಡಿಕೆದರ ಏರಿಕೆಯಾಗುತ್ತಿರುವಂತೆಯೇ ಅಡಕೆ ಬೆಲೆಯಲ್ಲಿಯೂ ಕೂಡ ನಿರಂತರ ಏರಿಕೆ ಕಾಣುತ್ತಲೇ ಇದೆ. ಇದು ರೈತರಿಗೆ ನೆಮ್ಮದಿಯನ್ನು ತರಿಸಿದ

ದಾವಣಗೆರೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಆಗಿದೆ. ಇದೀಗ ಕ್ವಿಂಟಾಲ್‌ ಅಡಿಕೆಯ ಗರಿಷ್ಠ ದರ 56,100 ರೂಪಾಯಿಗೆ ಏರಿಕೆ ಆಗಿದೆ. ಇದರಿಂದ ಅಡಿಕೆ ಬೆಳೆಗಾರರ ಮುಖದಲ್ಲಿ ಮಂದಹಾಸ ಮತ್ತೆ ಹೆಚ್ಚಾದಂತಾಗಿದೆ.

ಇದೀಗ ಚನ್ನಗಿರಿ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್‌ಗಳಲ್ಲಿ) ಗರಿಷ್ಠ ದರ 56,100 ರೂಪಾಯಿ, ಕನಿಷ್ಠ ದರ 52,512 ರೂಪಾಯಿ ಇದ್ದು, ಸರಾಸರಿ ಬೆಲೆ 55,333 ರೂಪಾಯಿ ಇದೆ. ಬೆಟ್ಟೆ ಅಡಿಕೆ ಗರಿಷ್ಠ ದರ 25,786 ರೂಪಾಯಿ, ಕನಿಷ್ಠ ದರ 18,187 ರೂಪಾಯಿ, ಸರಾಸರಿ ದರ 22,722 ರೂಪಾಯಿ ಆಗಿದೆ.

You may also like