Home » Huli Karthik: ಗಿಚ್ಚಿ ಗಿಲಿಗಿಲಿ ಸೀಸನ್‌-3 ರ ವಿಜೇತ ಹುಲಿ ಕಾರ್ತಿಕ್‌ ಮೇಲೆ ಎಫ್‌ಐಆರ್‌!

Huli Karthik: ಗಿಚ್ಚಿ ಗಿಲಿಗಿಲಿ ಸೀಸನ್‌-3 ರ ವಿಜೇತ ಹುಲಿ ಕಾರ್ತಿಕ್‌ ಮೇಲೆ ಎಫ್‌ಐಆರ್‌!

0 comments

Huli Karthik: ಹಾಸ್ಯನಟ, ಗಿಚ್ಚಿಗಿಚ್ಚಿ ಖ್ಯಾತಿಯ ಹುಲಿ ಕಾರ್ತಿಕ್‌ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಇತ್ತೀಚೆಗಷ್ಟೇ ಗಿಚ್ಚಿಗಿಚ್ಚಿಗಿಲಿಯ ಮೂರನೇ ಸೀಸನ್‌ನ ವಿನ್ನರ್‌ ಆಗಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಜನರ ಮನಸ್ಸನ್ನು ಕೂಡಾ ಗೆದ್ದಿದ್ದಾರೆ. ಒಂದು ಸಮುದಾಯವನ್ನು ಹೀಗಳೆಯುವ ರೀತಿಯಲ್ಲಿ ಹುಲಿ ಕಾರ್ತಿಕ್‌ ಮಾತನಾಡಿದ್ದರು. ನಿರ್ದಿಷ್ಟ ಸಮುದಾಯದ ಹೆಸರನ್ನು ನೆಗೆಟಿವ್‌ ಆಗಿ ಬಳಕೆ ಮಾಡಿದ್ದು, ಈ ಕಾರಣದಿಂದ ಹುಲಿ ಕಾರ್ತಿಕ ವಿರುದ್ಧ ದೂರು ದಾಖಲಾಗಿದೆ ಎಂದು ಹೇಳಲಾಗಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಕಲರ್ಸ್‌ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್‌ ಕಾರ್ಯಕ್ರಮದಲ್ಲಿ ಬಳಕೆ ಮಾಡಿದ ಪದವು ಬೋವಿ ಜನಾಂಗಕ್ಕೆ ನೋವುಂಟು ಮಾಡಿದ್ದು, ಇದರಿಂದ ಜಾತಿ ನಿಂದಿಸಿ ಮಾತನಾಡಿದ್ದರಿಂದ ಹುಲಿ ಕಾರ್ತಿಕ್‌ ಮೇಲೆ ಕ್ರಮ ಕೈಗೊಳ್ಳಲು ದೂರು ನೀಡಲಾಗಿದೆ.

ಹುಲಿ ಕಾರ್ತಿಕ್‌ ಮೇಲೆ ಮಾತ್ರವಲ್ಲದೇ, ಅನುಬಂಧ ಅವಾರ್ಡ್ಸ್‌ನ ಸಂಭಾಷಣೆಕಾರ, ಕಾರ್ಯಕ್ರಮದ ನಿರ್ಮಾಪಕ, ನಿರ್ದೇಶಕರ ಮೇಲೆ ಕೂಡಾ ಕೇಸ್‌ ದಾಖಲು ಮಾಡಲಾಗಿದೆ. ಹುಲಿ ಕಾರ್ತಿಕ್‌ ಎ-1 ಆರೋಪಿ, ಎ2 ಅನುಬಂಧ ಸ್ಕ್ರಿಪ್ಟ್‌ ರೈಟರ್‌, ಎ3 ಅನುಬಂಧ ಡೈರೆಕ್ಟರ್‌, ಎ4 ನಿರ್ಮಾಪಕನ ವಿರುದ್ಧ ದೂರು ದಾಖಲು ಮಾಡಲಾಗಿದೆ.

You may also like

Leave a Comment