Home » Bengaluru: ಬೆಂಗಳೂರಿನ ಅಪಾರ್ಟ್ಮೆಂಟ್ ನಲ್ಲಿ ಮಾನವನ ಅಸ್ತಿಪಂಜರ ಪತ್ತೆ

Bengaluru: ಬೆಂಗಳೂರಿನ ಅಪಾರ್ಟ್ಮೆಂಟ್ ನಲ್ಲಿ ಮಾನವನ ಅಸ್ತಿಪಂಜರ ಪತ್ತೆ

0 comments

Bengaluru: ಬೆಂಗಳೂರು ನಗರದ ಬೇಗೂರಿನ ಅಪಾರ್ಟ್ಮೆಂಟ್ ಒಂದರಲ್ಲಿ ಶೌಚಾಲಯ ಸ್ವಚ್ಛಗೊಳಿಸುವಾಗ ಮೂಳೆಗಳು, ತಲೆಬುರುಡೆ ರೀತಿಯ ಭಾಗಗಳು ಪತ್ತೆಯಾಗಿದ್ದು, ಮಾಹಿತಿ ಮೇರೆಗೆ ಪೊಲೀಸರು ಯುಡಿಆರ್ ದಾಖಲಿಸಿಕೊಂಡಿದ್ದಾರೆ.

ಬೇಗೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಎಂಎನ್ ಕ್ರೆಡೆನ್ಸ್ ಫ್ಲೋರಾ ಅಪಾರ್ಟ್‌ಮೆಂಟ್ಸ್‌ನ ಪಾರ್ಕಿಂಗ್ ಸ್ಥಳದ ಪಕ್ಕದಲ್ಲಿರುವ ಹೊಂಡಗಳಲ್ಲಿ ಅಸ್ತಿಪಂಜರದ ಅವಶೇಷಗಳು ಕಂಡುಬಂದಿದ್ದು, ಅದು ಪ್ರಾಣಿಗಳದ್ದೋ ಅಥವಾ ಮನುಷ್ಯರದ್ದೋ ಎಂದು ತಿಳಿಯಲು ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸಿಕೊಡಲಾಗಿದೆ.

ಕಳೆದ ಹತ್ತು ವರ್ಷಗಳ ಹಿಂದೆ ಆ ಅಪಾರ್ಟ್ಮೆಂಟ್ ನಿರ್ಮಾಣಕ್ಕೂ ಮೊದಲು ಆ ಜಾಗದಲ್ಲಿ ಸ್ಮಶಾನ ಇತ್ತು ಎಂದು ಸ್ಥಳೀಯರು ಹೇಳಿದ್ದು, ಎಸ್ಎಲ್ ವರದಿ ಬಂದ ಬಳಿಕವಷ್ಟೇ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ಇದನ್ನೂ ಓದಿ:Belthangady: ಗುರುವಾಯನಕೆರೆಯಲ್ಲಿ ಉಲಾಯಿ ಪಿದಾಯಿ ಜೂಜಾಟ: 9 ಮಂದಿಯ ವಿರುದ್ಧ ಕೇಸ್‌ ದಾಖಲು!

You may also like