4
ಬೆಂಗಳೂರು: ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿಯೊಬ್ಬಳು ಆತ್ಮಹತ್ಯೆ ಶರಣಾದ ಘಟನೆ ಹೆಬ್ಬಾಳದ ಕನಕನಗರದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಬಾಹರ್ ಅಸ್ಮಾ (29) ಎಂದು ಗುರುತಿಸಲಾಗಿದೆ. ಬಶೀರ್ ವುಲ್ಲಾ ಎಂಬಾತನ ಜತೆ ಆಕೆಗೆ ಮದುವೆ ಆಗಿತ್ತು. ಆತನಿಗೆ ಬೇರೆ ಯುವತಿ ಜೊತೆಗೆ ಅನೈತಿಕ ಸಂಬಂಧವಿದೆ ಎಂಬ ಆರೋಪ ಇದೀಗ ಕೇಳಿಬಂದಿದೆ.
ಇದೀಗ ಮಹಿಳೆ ಕುಟುಂಬಸ್ಥರು ಅಸ್ಮಾಳನ್ನು ಕೊಲೆ ಮಾಡಿ ನೇಣು ಹಾಕಲಾಗಿದೆ ಎಂದು ಆರೋಪಿಸಿದೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
