Home » ಪತಿ ಸತ್ತ ಹತ್ತೇ ನಿಮಿಷಕ್ಕೆ ಪತ್ನಿಯೂ ಸಾವು |ಸಾವಲ್ಲೂ ಜೊತೆಯಾದ ಅಮರ ದಂಪತಿಗಳು

ಪತಿ ಸತ್ತ ಹತ್ತೇ ನಿಮಿಷಕ್ಕೆ ಪತ್ನಿಯೂ ಸಾವು |ಸಾವಲ್ಲೂ ಜೊತೆಯಾದ ಅಮರ ದಂಪತಿಗಳು

0 comments

ಯಾದಗಿರಿ:ಪತಿ ಸತ್ತ ಹತ್ತೇ ನಿಮಿಷದ ಬಳಿಕ ಪತ್ನಿಯೂ ಸತ್ತು, ಸಾವಿನಲ್ಲೂ ದಂಪತಿಗಳು ಒಂದಾದ ಅಚ್ಚರಿಯ ಘಟನೆ ಯಾದಗಿರಿ ತಾಲ್ಲೂಕಿನ ಮೋಟ್ನಳ್ಳಿ ಗ್ರಾಮದಲ್ಲಿ ನಡೆದಿದೆ

ಧೂಳಪ್ಪ (80) ಹಾಗೂ ಕಾಶಮ್ಮ (70) ಸಾವಿನಲ್ಲೂ ಒಂದಾದ ದಂಪತಿ.

ಈ ದಂಪತಿಗಳಿಬ್ಬರು ಕೂಡ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ನಿನ್ನೆ ಮಧ್ಯಾಹ್ನ ಧೂಳಪ್ಪ ಅವರು ಮನೆಯಲ್ಲಿ ಮೃತಪಟ್ಟಿದ್ದರು.ಪತಿಯ ಮರಣದಿಂದ ದುಃಖತಪ್ತ ಕಾಶಮ್ಮ ಅಳುತ್ತಿದ್ದಾಗಳೇ ಉಸಿರು ಕಟ್ಟಿ ಮೃತಪಟ್ಟಿದ್ದಾರೆ.ಜೊತೆಯಾಗಿ ದಾಂಪತ್ಯಕ್ಕೆ ಕಾಲಿಟ್ಟ ದಂಪತಿ, ಸಾವಿನ ಹಾದಿಗೂ ಜೊತೆಯಾಗಿ ನಡೆದರು. ಇವರು ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

You may also like

Leave a Comment