Home » ಪರ ಯುವತಿಯೊಂದಿಗೆ ಹೋಟೆಲ್ ರೂಮ್ ನಲ್ಲಿದ್ದಾಗ ಪತ್ನಿ ಮತ್ತು ಮಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿ!!ಮುಂದೆ ನಡೆಯಿತು ಆತನ ಪತ್ನಿಯಿಂದ ಚರ್ಮ ಸುಲಿಯುವ ಕಾರ್ಯ

ಪರ ಯುವತಿಯೊಂದಿಗೆ ಹೋಟೆಲ್ ರೂಮ್ ನಲ್ಲಿದ್ದಾಗ ಪತ್ನಿ ಮತ್ತು ಮಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿ!!ಮುಂದೆ ನಡೆಯಿತು ಆತನ ಪತ್ನಿಯಿಂದ ಚರ್ಮ ಸುಲಿಯುವ ಕಾರ್ಯ

0 comments

ದಾಂಪತ್ಯ ಜೀವನದಲ್ಲಿ ಅನ್ಯ ಪುರುಷ ಅಥವಾ ಮಹಿಳೆಯ ಪ್ರವೇಶದಿಂದ ಅದೆಷ್ಟೋ ದಂಪತಿಗಳ ಸಂಸಾರ ಹಾಳಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಗಂಡ ಅಥವಾ ಹೆಂಡತಿ ಇನ್ನೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿರುವುದರಿಂದ ಅನೇಕ ಕೊಲೆಗಳು, ಅನೇಕ ವಿಚ್ಛೇದನಗಳೂ ನಡೆದಿವೆ. ಅಂತಹುದೇ ಒಂದು ಘಟನೆ ಗುಜರಾತ್ ನಲ್ಲಿ ನಡೆದಿದ್ದು, ಪರ ಯುವತಿಯೊಂದಿಗೆ ಹೋಟೆಲ್ ರೂಮ್ ನಲ್ಲಿ ಚಕ್ಕಂದವಾಡುತ್ತಿದ್ದ ಪತಿಯನ್ನು ಕಂಡ ಪತ್ನಿಯು ಆತನನ್ನು ಮನಬಂದಂತೆ ಥಳಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಮಹಿಳೆಯು ತನ್ನ ಮಗಳೊಂದಿಗೆ ಶಾಪಿಂಗ್ ಗೆಂದು ತೆರಳಿದ್ದ ಸಂದರ್ಭದಲ್ಲಿ , ಹೋಟೆಲ್ ಒಂದಕ್ಕೆ ಊಟಕ್ಕೆ ತೆರಳಿದ್ದರು. ಇದೇ ವೇಳೆಗೆ ಅದೇ ಹೋಟೆಲ್ ನ ರೂಮ್ ಗೆ ಅನ್ಯ ಯುವತಿಯೊಂದಿಗೆ ಆಕೆಯ ಗಂಡ ತೆರಳುತ್ತಿರುವುದನ್ನು ಕಂಡ ಮಹಿಳೆಯ ಕೋಪ ನೆತ್ತಿಗೇರಿದ್ದು, ಕೂಡಲೇ ಮಹಿಳೆ ಮತ್ತು ಮಗಳು ಹೋಟೆಲ್ ರೂಮಿನಿಂದ ಯುವತಿ ಮತ್ತು ಮಹಿಳೆಯ ಪತಿಯನ್ನು ಹೊರಗಡೆ ಎಳೆದುಕೊಂಡು ಬಂದು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

https://www.instagram.com/p/CSgffQ4FgpV/?utm_source=ig_embed&utm_campaign=embed_video_watch_again
ವೀಡಿಯೋ ತುಣುಕು

ಇಷ್ಟಕ್ಕೂ ಸುಮ್ಮನಾಗದ ಮಹಿಳೆ ಆ ಯುವತಿಯನ್ನು ಬೆತ್ತಲೆಯಾಗಿ ತೆರಳುವಂತೆ ಗದ್ದಲ ನಡೆಸಿದ್ದಾರೆ.ಸದ್ಯ ಇವರ ಗಲಾಟೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆಕೆಯ ರಾದ್ಧಾಂತದಿಂದಾಗಿ ಗಂಡನ ಅನೈತಿಕ ಸಂಬಂಧ ಬಯಲಾಗಿದೆ.

You may also like

Leave a Comment